ಮೂಡುಬಿದಿರೆ : ಕಡಂದಲೆ ಸುಬ್ರಮಣ್ಯ ಪ್ರೌಢಶಾಲೆಯಲ್ಲಿ ಯೋಜನೆಯ ವತಿಯಿಂದ ಜ್ಞಾನವಿಕಾಸದ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.
ದ. ಕ. ಹಾಲು ಉತ್ಪಾದಕ ಒಕ್ಕೂಟದ ಅಧ್ಯಕ್ಷರು ಶ್ರೀ ಸುಚರಿತ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಯೋಜನೆಯ ಎಲ್ಲಾ ಕಾರ್ಯಕ್ರಮಗಳು ಸರಕಾರಕ್ಕೆ ಪೂರಕವಾಗಿದೆ. ಕೇಂದ್ರ ಸರಕಾರ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಗೆ 33%ಮೀಸಲಾತಿಯನ್ನು ತಂದಿದೆ. ಖಾವಂದರ ದಿಟ್ಟ ಹೆಜ್ಜೆ ಮಹಿಳೆಯರನ್ನು ಸಬಲೆಯರನ್ನಾಗಿ ಸ್ವಾವಲಂಬಿಯರನ್ನಾಗಿ ಮಾಡಿದೆ ಎಂದರು.
ಜೆಸಿಐ ಅಧ್ಯಕ್ಷೆ ಮಾಲತಿ ಉಮೇಶ್ ನಾಯ್ಕ್ ಮಹಿಳೆಯರ ಸಾಧನೆಯ ಕತೆಗಳ ಮೂಲಕ ಜ್ಞಾನದ ಬೆಳಕು ಚೆಲ್ಲಿದರು. ಅಧ್ಯಕ್ಷತೆ ವಹಿಸಿದ ಸುಬ್ರಮಣ್ಯ ಶಾಲೆಯ ಮುಖ್ಯಶಿಕ್ಷಕ ದಿನಕರ ಕುಂಭಾಶಿ ಮಾತನಾಡಿ, ಯೋಜನೆಯ ಕಾರ್ಯಕ್ರಮಗಳು ಮಕ್ಕಳ ಭವಿಷ್ಯಕ್ಕೂ ಪೂರಕವಾಗಿದೆ. ಈ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುವುದು ಮಹಿಳೆಯರನ್ನು ಸಬಲೆ ಯರಾನ್ನಾಗಿ ಮಾಡಿ ತೋರಿಸಿದೆ ಎಂದರು.
ತಾಲೂಕಿನ ಯೋಜನಾಧಿಕಾರಿ ಸುನಿತಾ ನಾಯ್ಕ್ ಮಾತನಾಡಿ, ಮಹಿಳೆಯರು ಸ್ವಾವಲಂಬಿಯಾಗಿ ಮುಂದೆ ಬರಲು ಜ್ಞಾನ ವಿಕಾಸದ ಕಾರ್ಯಕ್ರಮಗಳ ಕಾರ್ಯಕ್ರಮದ ವಿವರ ಉದ್ದೇಶವನ್ನು ತಿಳಿಸಿದರು.ವಲಯದ ಮತ್ತು ಒಕ್ಕೂಟದ ಅಧ್ಯಕ್ಷ ಜಗದೀಶ್ ಕೋಟ್ಯಾನ್ ಅತಿಥಿಯಾಗಿ ಭಾಗವಹಿಸಿದರು.
ಜ್ಞಾನವಿಕಾಸದ ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಸೇವಾಪ್ರತಿನಿಧಿ ವಸಂತಿ ವಂದಿಸಿದರು.ಜ್ಞಾನ ವಿಕಾಸದ ಸಮನ್ವಯ ಅಧಿಕಾರಿ ವಿದ್ಯಾ ನಿರೂಪಿಸಿದರು.