ಕಾರ್ಕಳ: ಬಗೆಬಗೆಯ ವೆರೈಟಿ ಐಸ್ ಕ್ರೀಮ್ ಯಾರಿಗೆ ಇಷ್ಟವಿಲ್ಲ ಹೇಳಿ, ಪುಟಾಣಿಗಳಿಂದ ಹಿಡಿದು ವಯಸ್ಸಾದವರಿಗೂ ತಂಪಾದ ರುಚಿಕರ ಐಸ್ ಕ್ರೀಮ್ ಹೆಸರೆತ್ತಿದರೆ ಸಾಕು ಬಾಯಿಯಲ್ಲಿ ನೀರೂರುವುದು ಸಹಜ. ಇನ್ನೇನು ಬಿರುಬೇಸಗೆ ಶುರುವಾಗುತ್ತಿದೆ, ಈ ಬಿಸಿಯಾದ ವಾತಾವರಣದಲ್ಲಿ ಆರಾಮವಾಗಿ ಕುಳಿತು ನಿಮ್ಮ ಇಷ್ಟದ ಐಸ್ ಕ್ರೀಮ್ ಸವಿಯಲು ಕಾರ್ಕಳದಲ್ಲಿ `ವಿಂಟೇಜ್ ರಾಯಲ್ ಸ್ಕೂಪ್’ ಐಸ್ ಕ್ರೀಮ್ ಪಾರ್ಲರ್ ಇದೇ ಸೆಪ್ಟೆಂಬರ್ 27ರಂದು ಶುಭಾರಂಭಗೊಳ್ಳಲಿದೆ.
ಕಾರ್ಕಳದ ಆನೆಕರೆ ಶ್ರೀಕೃಷ್ಣ ಮಂದಿರ ಬಳಿ ವಿಂಟೇಜ್ ರಾಯಲ್ ಸ್ಕೂಪ್ ಐಸ್ ಕ್ರೀಮ್ ಪಾರ್ಲರ್ ಅತ್ಯಾಧುನಿಕ ಮನಸೂರೆಗೊಳ್ಳುವ ಒಳವಿನ್ಯಾಸ ಹಾಗೂ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯೊಂದಿಗೆ ಶುಭಾರಂಭಗೊಳ್ಳಲಿದೆ. ವಿಂಟೇಜ್ ರಾಯಲ್ ಸ್ಕೂಪ್ ನಲ್ಲಿ ಬಾಯಿಯಲ್ಲಿ ನೀರೂರಿಸುವ ಫಲೂದ, ಸಿಜ್ಲಿಂಗ್,ಮೊಜಿತ, ಸ್ಪೆಷಲ್ ಐಸ್ ಕ್ರೀಮ್,ಫಿಝಾ, ಬರ್ಗರ್,ಸ್ಯಾಂಡ್ವಿಚ್, ಪಾಸ್ತಾ ಸೇರಿದಂತೆ ಹಲವು ಬಗೆಯ ಐಸ್ ಕ್ರೀಮ್ ಗಳು, ಫ್ರೆಶ್ ಜ್ಯೂಸ್, ಮಿಲ್ಕ್ ಶೇಕ್ ಸೇರಿದಂತೆ ಮ್ಯಾಗಿ, ಚಾಟ್ಸ್, ಬಿಸಿ ಪಾನೀಯಗಳು ಸೇರಿದಂತೆ ಹಲವಾರು ಬಗೆಯ ಖಾದ್ಯಗಳು ಗ್ರಾಹಕರ ಆಯ್ಕೆಗೆ ತಕ್ಕಂತೆ ಲಭ್ಯವಿದೆ
ಈ ನೂತನ ಸಂಸ್ಥೆಯ ಉದ್ಘಾಟನಾ ಸಮಾರಂಭ ಸೆ.27 ರ ಬುಧವಾರ ಸಂಜೆ 4 ಗಂಟೆಗೆ ನಡೆಯಲಿದ್ದು, ಖ್ಯಾತ ಚಲನಚಿತ್ರ ನಿರ್ದೇಶಕ,ನಟ ಹಾಗೂ ಬಿಗ್ ಬಾಸ್ ಸೀಸನ್-9ರ ವಿಜೇತ ರೂಪೇಶ್ ಶೆಟ್ಟಿ ವಿಂಟೇಜ್ ರಾಯಲ್ ಸ್ಕೂಪ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ.ಜಿ ಕತ್ತಲಸಾರ್, ತುಳುನಾಡ ತುಡರ್ ಕಲಾವಿದ ಕೀರ್ತಿ ಕಾರ್ಕಳ ಭಾಗವಹಿಸಲಿದ್ದಾರೆ ಎಂದು ವಿಂಟೇಜ್ ರಾಯಲ್ ಸ್ಕೂಪ್ ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.