ಕಾರ್ಕಳ: ಕುಂಭಶ್ರೀ ವಿವಿಧೋದ್ದೇಶ ಸಹಕಾರ ಸಂಘದ 9 ನೇ ವಾರ್ಷಿಕ ಮಹಾಸಭೆಯು ಜೋಡು ರಸ್ತೆಯ ಕುಲಾಲ್ ಸಭಾಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಕೃಷ್ಣ ಮೂಲ್ಯ ವಹಿಸಿದ್ದರು
ಸಂಘದಲ್ಲಿ ಎ ದರ್ಜೆಯ 850 ಸದಸ್ಯರಿದ್ದಾರೆ. ಸುಮಾರು 4.5 ಕೋಟಿ ನಿರಖು ಠೇವಣಿ ಸಂಘದಲ್ಲಿದೆ. 3.21 ಕೋಟಿ ಸಾಲ ನೀಡಲಾಗಿದ್ದು, ಪ್ರಸಕ್ತ ವರ್ಷದಲ್ಲಿ ಸಂಘ 11,11,690 ರೂ. ಲಾಭ ಗಳಿಸಿದೆ. ಇದೇ ವೇಳೆ ಸಂಘದ ಸದಸ್ಯರಿಗೆ ಶೇಕಡಾ 6 ಡಿವಿಡೆಂಡ್ ಘೋಷಣೆ ಮಾಡಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಸದಾನಂದ ಮೂಲ್ಯ, ನಿರ್ದೇಶಕರಾದ ಭೋಜ ಕುಲಾಲ್, ಚಂದ್ರ ಕುಲಾಲ್, ದಯಾನಂದ ಕುಲಾಲ್, ಉದಯ್ ಕುಲಾಲ್, ದಿವಾಕರ್ ಬಂಗೇರ, ಸುರೇಂದ್ರ ಕುಲಾಲ್, ರೇವತಿ ಮೂಲ್ಯ, ಸುಗಂಧಿ ಕುಲಾಲ್, ಪ್ರಭಾಕರ್ ಇನ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೃದಯ ಕುಲಾಲ್ ಉಪಸ್ಥಿತರಿದ್ದರು.
ಹೃದಯ ಕುಲಾಲ್ ವರದಿ ವಾಚಿಸಿದರು. ಸಂಘದ ಹಿರಿಯ ಗುಮಾಸ್ತ ಸಂದೇಶ ಕುಲಾಲ್ ಸ್ವಾಗತಿಸಿದರು. ಸನ್ನಿಧಿ ಕುಲಾಲ್ ಪ್ರಾರ್ಥಿಸಿದರು. ಉದಯ ಕುಲಾಲ್ ವಂದಿಸಿ, ಸುನಿಲ್ ಕಾರ್ಯಕ್ರಮ ನಿರೂಪಿಸಿದರು.