Share this news

ಕಾರ್ಕಳ: ತಾಲೂಕಿನ ಬೋಳ ವ್ಯವಸಾಯ ಸೇವಾ ಸಹಕಾರಿ ಸಂಘದ 2022-2023 ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಶಿಲ್ಪಶ್ರೀ ಸಭಾಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಬಿ ಸದಾಶಿವ ಶೆಟ್ಟಿಯವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ಈ ವರ್ಷದಲ್ಲಿ ರೂ 44 ಕೋಟಿ 95 ಲಕ್ಷ ದುಡಿಯುವ ಬಂಡವಾಳ ಹೊಂದಿದ್ದು ವಾರ್ಷಿಕ ವ್ಯವಹಾರವು ರೂ 192 ಕೋಟಿ 52 ಲಕ್ಷ ಆಗಿದ್ದು, ಎ ತರಗತಿ ಲೆಕ್ಕ ಪರಿಶೋಧನಾ ವರ್ಗೀಕರಣ ಆಗಿರುತ್ತದೆ. ಸಂಸ್ಥೆಯಲ್ಲಿ 3801 ಸದಸ್ಯರಿದ್ದು ರೂ. 1 ಕೋಟಿ 63 ಲಕ್ಷ ಷೇರು ಬಂಡವಾಳವಿದೆ. ಸಂಘವು 30 ಕೋಟಿ 26 ಲಕ್ಷ ಮೇಲ್ಪಟ್ಟು ಠೇವಣಾತಿ ಹೊಂದಿದ್ದು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿAದ 11 ಕೋಟಿ 19 ಲಕ್ಷ ಸಾಲವನ್ನು ಪಡೆದಿದ್ದು, ಸದಸ್ಯರಿಗೆ 35 ಕೋಟಿ 60 ಲಕ್ಷ ಸಾಲನೀಡಲಾಗಿದೆ. .10 ಕೋಟಿ 65 ಲಕ್ಷ ಧನವಿನಿಯೋಗವನ್ನು ಮಾಡಿರುತ್ತದೆ. ಅಲ್ಲದೇ ಸಂಘ 1 ಕೋಟಿ ಆಸ್ತಿಯನ್ನು ಹೊಂದಿದ್ದು ಪ್ರಸಕ್ತ ಸಾಲಿನಲ್ಲಿ 1 ಕೋಟಿ 90 ಸಾವಿರ ಲಾಭಾಂಶ ಪಡೆದಿದೆ. ಇದೇ ಸಂದರ್ಭದಲ್ಲಿ ಸದಸ್ಯರಿಗೆ ಶೇಕಡಾ 12% ಡಿವಿಡೆಂಟ್ ಅನ್ನು ಘೋಷಣೆ ಮಾಡಲಾಯಿತು. ಸಾಲದ ವಸೂಲಾತಿಯು 98.32% ರಷ್ಟಿದ್ದು ಸಂಘವು ಪ್ರಗತಿಯ ಪಥದಲ್ಲಿ ಮುಂದುವರಿಯತ್ತಿದೆ ಎಂದರು.

ಬೋಳ ವ್ಯವಸಾಯ ಸೇವಾ ಸಹಕಾರಿ ಸಂಘವು ಬೋಳ ,ನಿಟ್ಟೆ, ಕಾಂತಾವರ ಕಾರ್ಯವ್ಯಾಪ್ತಿಯನ್ನು ಹೊಂದಿದ್ದು ಮೂರು ಗ್ರಾಮಗಳಲ್ಲಿ ಶಾಖೆಯನ್ನು ಹೊಂದಿದೆ. ಸುಮಾರು 700 ಕ್ಕೂ ಹೆಚ್ಚಿನ ಕೃಷಿಕ ಸದಸ್ಯರಿಗೆ ಕೃಷಿ ಸಾಲವನ್ನು ನೀಡಿದ್ದು ಸುಮಾರು ಒಂದು ಸಾವಿರಕ್ಕೂ ಅಧಿಕ ಸದಸ್ಯರಿಗೆ ಕೃಷಿಯೇತರ ಸಾಲವನ್ನು ನೀಡಿರುತ್ತದೆ . ಶೀಘ್ರದಲ್ಲಿ ಗುಂಡ್ಯಡ್ಕದಲ್ಲಿ ಹೊಸ ಶಾಖೆಯನ್ನು ಪ್ರಾರಂಭಿಸಲು ಉದ್ದೇಶಿಸಿದ್ದು ತನ್ನ ವ್ಯವಹಾರವನ್ನು ಇನ್ನಷ್ಟು ಅಭಿವೃಧ್ದಿ ಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.ಕೃಷಿ ಸಾಲ ಮತ್ತು ಕೃಷಿಯೇತರ ಸಾಲ ವಿತರಣೆ ಅಲ್ಲದೇ ಗೃಹ ಸಾಲ,ವಾಹನ ಸಾಲ ಗ್ರಾಹಕ ಉಪಕರಣ ಖರೀದಿ ಸಾಲದೊಂದಿಗೆ ವ್ಯಾಪಾರ ವಹಿವಾಟನ್ನು ಕೂಡ ಮಾಡುತ್ತಿದ್ದು ರೈತರ ಅವಶ್ಯಕತೆಗಳನ್ನು ಪೂರೈಸುತ್ತಿದೆ. ನಿಟ್ಟೆ ಶಾಖೆಯಲ್ಲಿ 1 ಕೋಟಿ 75 ಲಕ್ಷದ ನಬಾರ್ಡ್ ಯೋಜನೆಯ ಮೂಲಕ ಬಹುಪಯೋಗಿ ಕಟ್ಟಡವನ್ನು ನಿರ್ಮಾಣ ಮಾಡಿ ರೈತರಿಗೆ ಉಪಯೋಗವಾಗುವಂತಹ ಗೋದಾಮು ಮತ್ತು ಹೊಸ ಯೋಜನೆಗಳ ಮೂಲಕ ರೈತರ ದೈನಂದಿನ ಅವಶ್ಯಕತೆಗಳ ಪೂರೈಕೆಯ ಕೇಂದ್ರವನ್ನು ತೆರೆಯಲು ಉದ್ದೇಶಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಸಂಘದ ಕಾರ್ಯವ್ಯಾಪ್ತಿಯಲ್ಲಿ ಇರುವ 3 ಜನ ಉತ್ತಮ ಕೃಷಿ ಸದಸ್ಯರಾದ ರಾಮ ಭಂಡಾರಿ ಪಾಡಿಮನೆ ಬೋಳ , ಜಾನ್ ಅಲ್ಪೋನ್ಸ ಕೆರೆಕೋಡಿ ಬೋಳ , ರಾಜು ಕುಲಾಲ್ ಪರಪಾಡಿ ನಿಟ್ಟೆ ಶ್ಯಾಮ ಕೋಟ್ಯಾನ್ ಬೋಲ್ಜಾಲು ಬಾರಾಡಿ ಕಾಂತಾವರ ಹಾಗೂ 6 ಜನ ಉತ್ತಮ ಗ್ರಾಹಕ ಸದಸ್ಯರಾದ ಶಾಂತ ಶೆಟ್ಟಿ ಸುಂಕಮಾರು ಬೋಳ, ಲಲಿತಾ ಶೆಟ್ಟಿ ನಿಟ್ಟೆ , ಶಕುಂತಳ ಕೆಮ್ಮಣ್ಣು ನಿಟ್ಟೆ , ಸುಶೀಲಾ ಪದವು ನಿಟ್ಟೆ , ಭೋಜ ಶೆಟ್ಟಿಗಾರ್ ಕಾಂತಾವರ , ರಘುನಾಥ ದೇವಾಡಿಗ ಕಾಂತಾವರ ಇವರನ್ನು ಸನ್ಮಾನಿಸಲಾಯಿತು.


ಸಂಘದ ವ್ಯವಹಾರದ ಪ್ರಗತಿಗೆ ಸಹಕಾರವನ್ನು ನೀಡಿದ ಹಿರಿಯ ಸಿಬ್ಬಂದಿ ಪ್ರಮೀತ್ ಶೆಟ್ಟಿ ಬೋಳ ,ಜ್ಯೋತಿ ಬೋಳ ಇವರನ್ನು ಸನ್ಮಾನಿಸಲಾಯಿತು.
ಸಂಘದ ಕಾರ್ಯಕ್ಷೇತ್ರದ ಸದಸ್ಯರ ಮಕ್ಕಳಿಗಾಗಿ ಪಿ ಯು ಸಿ ಹಾಗೂ ಎಸ್..ಎಸ್ .ಎಲ್.ಸಿ ಶೇಕಡಾ 90% ಕ್ಕಿಂತ ಮೇಲ್ಪಟ್ಟು ಅಂಕ ಗಳಿಸಿದ 20 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ನವೀನಚಂದ್ರ ಜೈನ್ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಮುರಳಿಧರ ಶರ್ಮ,ಅವಿನಾಶ್ ಮಲ್ಲಿ ,ಕೆ ಗಣಪತಿ ಭಟ್,ಸರ‍್ಯಕಾಂತ್ ಶೆಟ್ಟಿ, ಮೋಹನ್ ದಾಸ್ ಅಡ್ಯಂತಾಯ , ಜಯರಾಮ ಸಾಲ್ಯಾನ್, ನಳಿನಿ ಶೆಟ್ಟಿ,ದಿವ್ಯ ನಾಯಕ್ ,ಸತೀಶ್ ನಾಯ್ಕ್ ಗೋಪಾಲ ಮತ್ತು ವಿಶೇಷ ಆಹ್ವಾನಿತ ನಿರ್ದೇಶಕರಾದ ದಿನೇಶ್ ಶೆಟ್ಟಿ ,ಪ್ರೇಮ ಮೂಲ್ಯ ಹಾಗೂ ಮುಖ್ಯಕಾರ್ಯನಿರ್ವಹಣಾದಿಕಾರಿ ದಿನೇಶ್ ಆಚಾರ್ ಉಪಸ್ಥಿತರಿದ್ದರು.

ಸಂಘದ ಸಿಬ್ಬಂದಿ ಪ್ರಾರ್ಥಿಸಿ, ಉಪಾಧ್ಯಕ್ಷ ನವೀನ್‌ಚಂದ್ರಜೈನ್ ಸ್ವಾಗತಿಸಿದರು. ನಿರ್ದೇಶಕರರಾದ ಮೋಹನ್‌ದಾಸ್ ಅಡ್ಯಂತಾಯ ವಂದಿಸಿದರು. ದೀಪಾ ಶೆಟ್ಟಿ ಹಾಗೂ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *