ಕಾರ್ಕಳ: ಕಾರ್ಕಳದ ಆನೆಕೆರೆಯ ಶ್ರೀಕೃಷ್ಣ ಮಂದಿರದ ಬಳಿ ನೂತನ ಐಸ್ ಕ್ರೀಮ್ ಪಾರ್ಲರ್ ವಿಂಟೇಜ್ ರಾಯಲ್ ಸ್ಕೂಪ್ ಬುಧವಾರ ಶುಭಾರಂಭಗೊಂಡಿತು.
ಖ್ಯಾತ ಚಿತ್ರ ನಿರ್ದೇಶಕ, ನಟ ಹಾಗೂ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ನೂತನ ಸಂಸ್ಥೆಯನ್ನು ಉದ್ಘಾಟಿಸಿ,ವಿಂಟೇಜ್ ಎನ್ನುವ ಹೆಸರಿಗೆ ತಕ್ಕಂತೆ ಹಳೆಯ ಕಾಲದ ಅಪರೂಪದ ವಸ್ತುಗಳ ಸಂಗ್ರಹಾಲಯದ ಪರಿಕಲ್ಪನೆಯಡಿ ಉದ್ಯಮ ಆರಂಭಿಸಿದ್ದೀರಿ ಗ್ರಾಹಕರಿಗೆ ಸದಾ ನಗುಮೊಗದ ಸೇವೆ ನೀಡುವ ಮೂಲಕ ಉದ್ಯಮ ಉತ್ತರೋತ್ತರ ಅಭಿವೃದ್ಧಿಯಾಗಲಿ,ಜತೆಗೆ ಇನ್ನಷ್ಟು ಇಂತಹ ಉದ್ಯಮಗಳನ್ನು ತೆರೆಯುವಂತಾಗಲಿ ಎಂದು ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ ಕತ್ತಲಸಾರ್ ,ತುಳುನಾಡ ತುಡರ್ ಖ್ಯಾತಿಯ ಕೀರ್ತಿ ಕಾರ್ಕಳ ನೂತನ ಸಂಸ್ಥೆಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಆಗಮಿಸಿದ ಗಣ್ಯರಿಗೆ ಸಂಸ್ಥೆಯ ಪಾಲುದಾರರು ಸ್ಮರಣಿಕೆ ನೀಡಿ ಗೌರವಿಸಿದರು.
ರಂಗ ಕಲಾವಿದ, ಛಾಯಾಚಿತ್ರಗ್ರಾಹಕ ದತ್ತಾತ್ರೇಯ ಹಿರಿಯಂಗಡಿ ಸ್ವಾಗತಿಸಿ ವಂದಿಸಿದರು.