ಕಾರ್ಕಳ : ಹಯಾತುಲ್ ಇಸ್ಲಾಂ ಅಸೋಸಿಯೇಶನ್ (ರಿ) ಬಂಗ್ಲೆಗುಡ್ಡೆ ಹಾಗೂ ತ್ವೈಭಾ ಗಾರ್ಡನ್ ಬಂಗ್ಲೆಗುಡ್ಡೆ ಆಶ್ರಯ ದಲ್ಲಿ ಬಂಗ್ಲೆಗುಡ್ಡೆ ಸಲ್ಮಾನ್ ಜುಮ್ಮಾ ಮಸೀದಿಯ ವಠಾರದಲ್ಲಿ ಈದ್ ಮಿಲಾದ್ ಆಚರಿಸಲಾಯಿತು.
ತ್ವೈಭಾ ಗಾರ್ಡನ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಶರೀಫ್ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಲ್ಮಾನ್ ಜುಮ್ಮಾ ಮಸೀದಿಯಿಂದ ಬಂಗ್ಲೆಗುಡ್ಡೆ ಜಂಕ್ಷನ್ ವರೆಗೆ ಬೃಹತ್ ಮಿಲಾದ್ ಜಾಥಾ ನಡೆಯಿತು.
ಅಲ್ ಅಯ್ಯೂಬ್ ಮದ್ರಸ ,ಝಿಹಾ ಎ ಮುಸ್ತಫಾ ಹನಫಿ ಮದ್ರಸ, ತ್ವೈಭಾ ದಾವಾ ಕಾಲೇಜು, ಝಹರತುಲ್ ಖುರಾನ್, ತ್ವೈಭಾ ಗಾರ್ಡನ್ ಇಂಗ್ಲಿಷ್ ಮೀಡಿಯಂ ಶಾಲಾ ವಿಧ್ಯಾರ್ಥಿಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.
ಈ ಸಂದರ್ಭದಲ್ಲಿ ತ್ವೈಭಾ ಗಾರ್ಡನ್ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ಅಹ್ಮದ್ ಶರೀಫ್ ಸಅದಿ ಕಿಲ್ಲೂರು, ಝೈನುಲ್ ಅಭೀದ್ ಸಖಾಫಿ ಮಾಗುಂಡಿ, ಝಭೈರ್ ಸಖಾಫಿ ಹಾಕತ್ತೂರು,
ಅಬ್ದುಲ್ ಖಾದರ್ ಮದನಿ, ಸುಲೈಮಾನ್ ಸಖಾಪಿ ಸಜಿಫ, ಯೂನುಸ್ ಅಹ್ಸನಿ ಕಡಬ, ಮುನೀರ್ ಹಿಮಾಮಿ ಕಬಕ, ಮೌಲಾನ ಅಶ್ಪಾಕ್, ಹಯಾತುಲ್ ಇಸ್ಲಾಂ ಅಸೋಸಿಯೇಷನ್ ಮಾಜಿ ಅಧ್ಯಕ್ಷರುಗಳಾದ ಹನೀಫ್, ಬಶೀರ್, ರಜಬ್ ಪರನೀರು, ಮಾಜಿ ಉಪಾಧ್ಯಕ್ಷ ಕೆ ನೂರುದ್ದೀನ್, ಎಸ್ ಎಸ್ ಎಫ್ ಮುಖಂಡರುಗಳಾದ ರಫೀಕ್, ದಾವೂದ್, ಅಲ್ತಾಫ್, ಮೊಯಿದಿನ್ , ಫಯಾಜ್, ಮುನೀರ್ , ಮುಷ್ತಾಕ್ ಮತ್ತಿತರರು ಉಪಸ್ಥಿತರಿದ್ದರು.
