ನವದೆಹಲಿ: ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆಯ 2022ನೇ ಸಾಲಿನ ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ ಭಾರತ 40 ನೇ ಸ್ಥಾನಕ್ಕೆ ಏರಿದೆ. ಇದು 7 ವರ್ಷಗಳಲ್ಲಿ 41 ಸ್ಥಾನಗಳ ಬೃಹತ್ ಏರಿಕೆಯಾಗಿದೆ.
ಜಾಗತಿಕ ನಾವಿನ್ಯತಾ ಸೂಚ್ಯಂಕ 2023ರ ಶ್ರೇಯಾಂಕದಲ್ಲಿ ಭಾರತವು 132 ಆರ್ಥಿಕತೆಗಳಲ್ಲಿ 40 ನೇ ಸ್ಥಾನ ಪಡೆದಿದೆ. ಜಿನೇವಾ ಮೂಲದ ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ ಈ ಸೂಚ್ಯಂಕ ಸಿದ್ಧಪಡಿಸಿದೆ. ಸೂಚ್ಯಂಕದಲ್ಲಿ ಕಳೆದ ಹಲವಾರು ವರ್ಷಗಳಿಂದ ಭಾರತವು ಏರುಗತಿಯಲ್ಲಿದೆ. 2015ರಲ್ಲಿ ಪಡೆದಿದ್ದ 81 ಸ್ಥಾನದಿಂದ ಈ ವರ್ಷ 40 ಕ್ಕೆ ಏರುತ್ತಿರುವ ಪಥದಲ್ಲಿದೆ ಎಂದು ಭಾರತ ಸರ್ಕಾರದ ನೀತಿ ಆಯೋಗ ಹೇಳಿದೆ.
ಸ್ಟಾರ್ಟಪ್ಗಳಿಗೆ ದೇಶದಲ್ಲಿ ಉತ್ತಮ ವಾತಾವರಣ ಸೃಷ್ಟಿ, ಖಾಸಗಿ ಹಾಗೂ ಸರ್ಕಾರಿ ಸಂಶೋಧನಾ ಸಂಸ್ಥೆಗಳ ಅದ್ಭುತ ಕೆಲಸ, ಜ್ಞಾನ ಬಂಡವಾಳ ಸುಧಾರಣೆ- ಇತ್ಯಾದಿಗಳು ಭಾರತದ ಸೂಚ್ಯಂಕ ಸುಧಾರಣೆಗೆ ಕಾರಣವಾಗಿವೆ. ಜಾಗತಿಕ ನಾವಿನ್ಯತಾ ಸೂಚ್ಯಂಕವು ವಿಶ್ವದಾದ್ಯಂತ ಸರ್ಕಾರಗಳಿಗೆ ತಮ್ಮ ದೇಶಗಳಲ್ಲಿನ ನಾವೀನ್ಯತೆಗೆ ಸಂಬAಧಿಸಿದ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳನ್ನು ಸೂಚಿಸುವ ವಿಶ್ವಾಸಾರ್ಹ ಮಾನದಂಡವಾಗಿದೆ.
ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ ನಿನ್ನೆ ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್ 2022 ಅನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಸ್ವಿಟ್ಜರ್ಲೆಂಡ್ ಸತತ 12 ನೇ ವರ್ಷಕ್ಕೆ ವಿಶ್ವದ ಅತ್ಯಂತ ನವೀನ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಎರಡನೇ ಸ್ಥಾನವನ್ನು ಯುಎಸ್ ಪಡೆದುಕೊಂಡಿದೆ ನಂತರ ಸ್ವೀಡನ್, ಯುಕೆ ಮತ್ತು ನೆದರ್ಲ್ಯಾಂಡ್ಸ್ ಸ್ಥಾನ ಪಡೆದುಕೊಂಡಿವೆ.
