ಉತ್ತರಕನ್ನಡ: ಈದ್ ಮಿಲಾದ್ ಹಬ್ಬದಂದು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದ ಶಿರಸಿ ಮೂಲದ ಆರೋಪಿಯನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಿರಸಿಯ ರಾಮನಬೈಲ್ ನಿವಾಸಿ ಉಮರ್ ಫಾರೂಕ್ ಅಬ್ದುಲ್ (38) ಬಂಧಿತ ಆರೋಪಿ.
ಉಮರ್ ಫಾರೂಕ್ ಈದ್ ಮಿಲಾದ್ ಹಬ್ಬದಂದು ರಾಷ್ಟ್ರಧ್ವಜದ ಮೇಲೆ ಗುಂಬಜ್ ಹಾಗೂ ಮುಸ್ಲಿಂ ಧರ್ಮದ ಘೋಷಣೆ ಬರೆದ ಚಿತ್ರ ಅಂಟಿಸಿದ್ದ. ಅಶೋಕ ಚಕ್ರವಿರುವ ಸ್ಥಳದಲ್ಲಿ ಗುಂಬಜ್ ಹಾಗೂ ಘೋಷಣೆ ಬರೆದು ಆ ಧ್ವಜವನ್ನು ತನ್ನ ಮನೆಯ ಬಳಿ ಒಂದು ಕಂಬಕ್ಕೆ ಕಟ್ಟಿದ್ದ ವಿಕೃತಿ ಮೆರೆದಿದ್ದ. ಈ ಘಟನೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು.
ಘಟನೆಗೆ ಸಂಬAಧಿಸಿದAತೆ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರಾಷ್ಟ್ರಧ್ವಜಕ್ಕೆ ಅವಮಾನ ತಡೆಗಟ್ಟುವಿಕೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.