ನವದೆಹಲಿ: ಈಗಾಗಲೇ ಚಲಾವಣೆಯಿಂದ ಹಿಂಪಡೆಯಲಾಗಿರುವ 2,000 ರೂ ಮುಖಬೆಲೆಯ ನೋಟುಗಳನ್ನು ಮರಳಿಸಲು ಮತ್ತು ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್ 30ರವರೆಗೆ ನೀಡಲಾಗಿದ್ದ ಕಾಲಾವಕಾಶವನ್ನು ಒಂದು ತಿಂಗಳ ಕಾಲ ವಿಸ್ತರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ ಇದೀಗ ರಿವರ್ಸ್ ಬ್ಯಾಂಕ್ 2,000 ರೂ ಮುಖಬೆಲೆಯ ನೋಟುಗಳನ್ನು ಮರಳಿಸಲು ಮತ್ತು ವಿನಿಮಯ ಮಾಡಿಕೊಳ್ಳಲು ಅಕ್ಟೋಬರ್ 7ವರೆಗೆ ಅವಕಾಶ ನೀಡಲಾಗುವುದು ಎಂದು ಇಂದು (ಸೆ.30) ಹೇಳಿದೆ.
ಅಕ್ಟೋಬರ್ 8 ರಿಂದ ಬ್ಯಾಂಕುಗಳು 2,000 ರೂಪಾಯಿ ನೋಟುಗಳನ್ನ ವಿನಿಮಯ ಮಾಡಿಕೊಳ್ಳುವುದನ್ನ ನಿಲ್ಲಿಸುತ್ತವೆ. ಆದಾಗ್ಯೂ, ಜನರು ಆರ್ಬಿಐನ 19 ಕಚೇರಿಗಳಲ್ಲಿ 2,000 ರೂ.ಗಳ ನೋಟುಗಳನ್ನ ವಿನಿಮಯ ಮಾಡಿಕೊಳ್ಳಬಹುದು. ನೋಟುಗಳನ್ನು ಇಂಡಿಯಾ ಪೋಸ್ಟ್ ಮೂಲಕ ಆರ್ಬಿಐನ ವಿತರಣಾ ಕಚೇರಿಗಳಿಗೆ ಅಂಚೆ ಮೂಲಕ ಕಳುಹಿಸಬಹುದು ಎಂದು ಆರ್‌ಬಿಐ ಹೇಳಿದೆ.