Share this news

ಮಂಗಳೂರು : ರಾಷ್ಟ್ರೀಯ ಹೆದ್ದಾರಿ 66ರ ಅವ್ಯವಸ್ಥೆಯನ್ನು ಖಂಡಿಸಿ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ನೇತೃತ್ವದಲ್ಲಿ ಕೂಳೂರಿನಲ್ಲಿ ಪ್ರತಿಭಟನಾ ಸಭೆ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಇನಾಯತ್ ಅಲಿ,
‘ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆಯನ್ನು ಸರಿಪಡಿಸುವ ಬಗ್ಗೆ ಜಿಲ್ಲೆಯ ಸಂಸದರ ಭರವಸೆ ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಿದೆ. ಕೂಳೂರು ಸೇತುವೆ ಸಂಚಾರಕ್ಕೆ ಸಮರ್ಥವಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಾಲ್ಕು ವರ್ಷಗಳ‌ ಹಿಂದೆಯೇ ವರದಿ ನೀಡಿದ್ದರೂ ಹೊಸ ಸೇತುವೆಯ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಪಂಪ್‌ವೆಲ್ ಸೇತುವೆ ಮಾಡಲು ಹತ್ತು ವರ್ಷ ಬೇಕಾಯಿತು, ಇನ್ನು ಕೆಪಿಟಿ, ನಂತೂರು ಸೇತುವೆ ಮಾಡಲು ಇಪ್ಪತ್ತು ವರ್ಷ ಬೇಕಾಗಬಹುದೆ’ ಎಂದು ಪ್ರಶ್ನಿಸಿದರು.

‘ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಒಂದೆರಡು ವರ್ಷದಲ್ಲಿ‌ ನಾವೇ ಸೇತುವೆ ಮಾಡಬೇಡಿ’ ಎಂದು ವ್ಯಂಗ್ಯವಾಡಿದರು.

ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಚಿತ್ರಾಪುರ, ಗುರುಪುರ ಬ್ಲಾಕ್ ಅಧ್ಯಕ್ಷ ಸುರೇಂದ್ರ ಕಂಬಳಿ, ಮಾಜಿ ಮೇಯರ್‌ಗಳಾದ ಶಶಿಧರ್ ಹೆಗ್ಡೆ, ಮಹಾಬಲ ಮಾರ್ಲ, ಹರಿನಾಥ್, ಕವಿತಾ ಸನಿಲ್, ಕಾರ್ಪೋರೆಟರ್ ಅನಿಲ್ ಕುಮಾರ್, ಮುಖಂಡರಾದ ಪ್ರತಿಭಾ ಕುಳಾಯಿ, ಗೋವರ್ಧನ್ ಶೆಟ್ಟಿಗಾರ್, ಪದ್ಮನಾಭ ಅಮೀನ್, ಬಿಕೆ ತಾರಾನಾಥ್, ರಾಜೇಶ್ ಕುಳಾಯಿ, ರೆಹಮಾನ್ ಖಾನ್ ಕುಂಜತ್ತಬೈಲ್ ಮತ್ತಿತರರಿದ್ದರು.

 

 

 

 

Leave a Reply

Your email address will not be published. Required fields are marked *