ಬೆಂಗಳೂರು: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವ ವಿರುದ್ಧ ಪ್ರತಿಭಟನೆ ಮಾಡುವ ನಿಟ್ಟಿನಲ್ಲಿ ಅಕ್ಟೋಬರ್ 10 ರಂದು ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡುವುದಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಘೊಷಣೆ ಮಾಡಿದ್ದಾರೆ.
ತಮಿಳುನಾಡಿನವರು ನಮ್ಮ ಮೇಲೆ ಕೆಟ್ಟ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಕೆಆರ್ಎಸ್ನಲ್ಲಿ ನಿಜವಾಗಿಯೂ ನೀರಿಲ್ಲ. ತಮಿಳುನಾಡಿನವರು ಯಾವುದೋ ದೇಶದ ಮೇಲೆ ಯುದ್ದ ಮಾಡಿದಂತೆ ಆಡುತ್ತಾರೆ. ಬೇಕಿದ್ದರೆ ತಮಿಳುನಾಡಿನವರು ಮಾರುವೇಶದಲ್ಲಿ ಬಂದು ಕೆಆರ್ಎಸ್ ರೌಂಡ್ ಹಾಕಿಕೊಂಡು ಹೋಗಲಿ. ರಾಜ್ಯ ಸರ್ಕಾರ ಪುನರ್ ಪರಿಶೀಲನಾ ಅರ್ಜಿ ಹಾಕಿದೆ. ಅರ್ಜಿ ಏನಾಯ್ತು, ಅಲ್ಲಿಯವರೆಗೆ ನೀರು ಏನಾಗ್ತಿದೆ ಎನ್ನುವ ಸತ್ಯ ನಮಗೆ ಬೇಕಿದೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.
ಈ ವಿಚಾರದಲ್ಲಿ ರಾಜಕೀಯ ಬೇಡ. ಇದನ್ನ ಕರ್ನಾಟಕದ ಜನತೆ ಗಂಭೀರವಾಗಿ ಚಿಂತನೆ ಮಾಡಬೇಕು. ನಾವು ತಮಿಳುನಾಡಿನ ತಪ್ಪು, ಬ್ಲಾಕ್ ಮೇಲ್, ಸ್ಟಾಲಿನ್ ಸರ್ಕಾರದ ವಿರುದ್ದ ಐದನೇ ತಾರೀಕು ಬೆಂಗಳೂರಿನಿAದ ಕೆಆರ್ಎಸ್ವರೆಗೆ ದೊಡ್ಡ ಮಟ್ಟದಲ್ಲಿ ಮೆರವಣಿಗೆ ಮಾಡಲಿದ್ದೇವೆ. ಕೆಆರ್ಎಸ್ನಲ್ಲಿ ಕನ್ನಡ ಒಕ್ಕೂಟದ ಮೇಳ ಮಾಡಲಿದ್ದೇವೆ. ನೂರಾರು ವಾಹನಗಳಲ್ಲಿ ತೆರಳಿ ಕನ್ನಡ ಒಕ್ಕೂಟದ ಮೇಳ, ಕಪ್ಪು ಬಾವುಟ ಪ್ರದರ್ಶನ , ಪ್ರತಿಭಟನೆ ಕರಾಳ ದಿನ ಆಚರಿಸಲಿದ್ದೇವೆ ಎಂದು ಹೇಳಿದ್ದಾರೆ.
ಸಿನಿಮಾದವ್ರು ಅವರಿಗೆ ಮನಸ್ಸಿಗೆ ಬಂದAತೆ ಮಾತನಾಡುತ್ತಿದ್ದಾರೆ. ವೀರಪ್ಪ ಮಿಯ್ಲಿ ಕೂಡ ಇಬ್ಬರೂ ಕುಳಿತು ಮಾತನಾಡಿ ಎನ್ನುತ್ತಾರೆ. ಎಲ್ಲಿ ಕುತ್ಕೊಂಡು ಮಾತನಾಡಬೇಕು, ಅವರ ಮನೆಯಲ್ಲ, ಚಿಕ್ಕಬಳ್ಳಾಪುರದಲ್ಲ ಅಥವಾ ದೊಡ್ಡಬಳ್ಳಾಪುರದಲ್ಲ ಎಂದು ಪ್ರಶ್ನಿಸಿದ್ದಾರೆ.