ಕಾರ್ಕಳ: ಕಾರ್ಕಳ ನಗರದ ಸಾಲ್ಮರದಲ್ಲಿನ ಎಕ್ಸಿಸ್ ಬ್ಯಾಂಕಿನಲ್ಲಿ ಬುಧವಾರ ಮುಂಜಾನೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಲಕ್ಷಾಂತರ ಮೌಲ್ಯದ ಸೊತ್ತುಗಳು ಬೆಂಕಿಗಾಹುತಿಯಾಗಿವೆ.
ಬೆಂಕಿ ಹೊತ್ತಿಕೊಂಡ ತಕ್ಷಣವೇ ಬ್ಯಾಂಕ್ ಮ್ಯಾನೇಜರ್ ಮೊಬೈಲ್ ಗೆ ಸ್ವಯಂಚಾಲಿತ ಸಂದೇಶ ರವಾನೆಯಾಗಿದೆ, ಇದರಿಂದ ಎಚ್ಚೆತ್ತ ಅವರು ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ,ಬಳಿಕ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.
ಅಗ್ನಿ ಅವಘಡದಿಂದ ಬ್ಯಾಂಕಿನ ಸರ್ವರ್ ಯೂನಿಟ್ ಹಾಗೂ ಇನ್ವರ್ಟರ್ ಸುಟ್ಟು ಭಸ್ಮವಾಗಿದ್ದು ಸುಮಾರು2.50 ಲಕ್ಷ ನಷ್ಟ ಸಂಭವಿಸಿದೆ ಎಂದು ಬ್ಯಾಂಕ್ ಮ್ಯಾನೇಜರ್ ಹೇಳಿದ್ದಾರೆ.
ತುರ್ತು ಸಂದರ್ಭಗಳಲ್ಲಿ ನಡೆಯುವ ಅವಘಡಗಳ ಕುರಿತ ಸಂದೇಶ ರವಾನೆಯಾಗಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.
ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಬಿ.ಎಂ ಸಂಜೀವ್, ಸಿಬ್ಬಂದಿಗಳಾದ ಜಯ ಮೂಲ್ಯ ,ಕೇಶವ್ ,ಸುಜಯ್ , ಹಸನ್ ಸಾಬ್, ವಿನಾಯಕ ಪಾಲ್ಗೊಂಡಿದ್ದರು.