Share this news

ಮೂಲ್ಕಿ: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣವನ್ನು ಭೇದಿಸಿದ ಪೊಲೀಸರು 7 ಲಕ್ಷ ರೂ. ಮೌಲ್ಯದ ಸೊತ್ತು ಸಹಿತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೂಲ್ಕಿ ಬೆಳ್ಳಾಯರು ಗ್ರಾಮದ ಕೋಲ್ನಾಡು ಚಂದ್ರಮೌಳೀಶ್ವರ ರಸ್ತೆಯ ನಿವಾಸಿ ವಸಂತಿ ಶೆಟ್ಟಿರವರ ಕುತ್ತಿಗೆಯಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಕರಿಮಣಿ ಸರ ಹಾಗೂ ಚಂದ್ರಮೌಳೀಶ್ವರ ಬಸ್‌ಸ್ಟ್ಯಾಂಡ್ ಬಳಿಯಿಂದ ಕಳುವಾಗಿದ್ದ ಸೂರಪ್ರಕಾಶ್ ಎನ್ ಎಂಬವರ ಬಜಾಜ್ ಡಿಸ್ಕವರ್ ಬೈಕ್ ಕಳವುಗೈದಿದ್ದ ಆರೋಪಿಗಳನ್ನು ಮುಲ್ಕಿ ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಆರೋಪಿಗಳನ್ನು ದಾವಣಗೆರೆ ಮೂಲದವರಾದ ರಘು ಎಸ್(30), ಪ್ರಮೋದ್ ವಿ (23), ಹೆಚ್.ರವಿಕಿರಣ್ (23),
ದಾವಲ ಸಾಬ್ ಹೆಚ್(25), ಮಂಜುನಾಥ, (29) ಎಂದು ಗುರುತಿಸಲಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್‌ರವರ ಮಾರ್ಗದರ್ಶನಂದAತೆ, ಕಾನೂನು & ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ದಾರ್ಥ ಗೋಯಲ್ ಐ.ಪಿ.ಎಸ್. ಮತ್ತು ಅಪರಾಧ & ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ನಿರ್ದೇಶನದಂತೆ ಮಂಗಳೂರು ಉತ್ತರ ವಿಭಾಗದ ಎ.ಸಿ.ಪಿ. ಮನೋಜ್ ಕುಮಾರ್ ರವರ ನೇತೃತ್ವದಲ್ಲಿ ಮುಲ್ಕಿ ಪೊಲೀಸ್ ಠಾಣೆಯ ಪಿ.ಐ. ವಿದ್ಯಾಧರ ಡಿ ಬಾಯ್ಕರಿಕರ್, ಪಿ.ಎಸ್.ಐ ಗಳಾದ ವಿನಾಯಕ ಬಾವಿಕಟ್ಟಿ, ಮಾರುತಿ.ಪಿ, ಎ.ಎಸ್.ಐ. ಸಂಜೀವ, ಉಮೇಶ್, ಸುರೇಶ್ ಕುಂದರ್ ಹೆಚ್.ಸಿಗಳಾದ ಕಿಶೋರ್ ಕುಮಾರ್, ಶಶಿಧರ, ಮಹೇಶ್, ಪ್ರಮೋದ್, ಚಂದ್ರಶೇಖರ್, ವಿಶ್ವನಾಥ, ಉದಯ್, ಜಯರಾಮ್, ಸತೀಶ್, ಪವನ್ ಮತ್ತು ಪಿ.ಸಿ.ಗಳಾದ ಅರುಣ್ ಕುಮಾರ್, ವಾಸುದೇವ, ವಿನಾಯಕ, ಶಂಕರ, ಶ್ರೀಮತಿ ಚಿತ್ರಾ, ಚೆಲುವರಾಜ್, ಶೇಖರ, ಯಶವಂತ್, ಬಸವರಾಜ್, ಸುರೇಂದ್ರ, ಅಂಜಿನಪ್ಪ, ಇಮಾಮ್, ಶರಣಪ್ಪ ರವರು ಕಾರ್ಯಚರಣೆಯಲ್ಲಿ ಸಹಕರಿಸಿದ್ದರು.

 

 

 

 

Leave a Reply

Your email address will not be published. Required fields are marked *