Share this news

ಉಡುಪಿ: ಅ.10ಕ್ಕೆ ಉಡುಪಿಯಲ್ಲಿ ಹಿಂದೂ ಸಮಾಜೋತ್ಸವ ನಿಗದಿಯಾಗಿದ್ದು, ಈ ಹಿನ್ನಲೆಯಲ್ಲಿ ಅನಧಿಕೃತವಾಗಿ ಅಳವಡಿಸಿದ್ದ ಎಲ್ಲಾ ಬ್ಯಾನರ್​ ಗಳನ್ನು ತೆರವು ಮಾಡಲಾಗಿದೆ.

ಶಿವಮೊಗ್ಗದ ಈದ್​​ಮಿಲಾದ್​​ ಗಲಾಟೆ ಬಿಸಿ ಇದೀಗ ಉಡುಪಿಗೂ ತಟ್ಟಿದೆ. ಕಾರ್ಯಕ್ರಮದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಉಡುಪಿ ಎಸ್​​ಪಿ ಡಾ.ಅರುಣ್ ಸೂಚನೆಯಂತೆ ನಗರದ ಸುತ್ತಮುತ್ತ ಅಳವಡಿಸಿದ್ದ ಬ್ಯಾನರ್​ಗಳನ್ನು ತೆರವು ಮಾಡಲಾಗಿದೆ. ಉಡುಪಿ ನಗರಸಭೆ ಪೌರಾಯುಕ್ತ ರಾಯಪ್ಪ ನೇತೃತ್ವದಲ್ಲಿ ಸಿಬ್ಬಂದಿಗಳು ಬ್ಯಾನರ್ ತೆರವುಗೊಳಿಸಿದ್ದಾರೆ.

ಶಿವಮೊಗ್ಗದ ರಾಗಿಗುಡ್ಡದಲ್ಲಿ ಇಂದು ಕೂಡ ನಿಷೇಧಾಜ್ಞೆ ಮುಂದುವರಿಕೆ ಆಗಿದ್ದು, ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಒದಲಾಗಿಸಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ.

 

 

 

 

Leave a Reply

Your email address will not be published. Required fields are marked *