ಕಾರ್ಕಳ: ಕಾರ್ಕಳದ ಮೂರೂರಿನಲ್ಲಿ ಅಕ್ಟೋಬರ್ 12 ರಿಂದ 18 ರ ವರೆಗೆ ಬಿ. ಎಂ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರಿಯೇಟಿವ್ ಕಾಲೇಜಿನ ಎನ್.ಎಸ್.ಎಸ್ ಶಿಬಿರವು ನಡೆಯಲಿದ್ದು, ಅದರ ಪೂರ್ವಭಾವಿ ಸಭೆಯು ಊರಿನ ಹಿರಿಯರು ಹಾಗೂ ಗಣ್ಯರ ಮಾರ್ಗದರ್ಶನದಲ್ಲಿ ನಡೆಯಿತು.
ಕ್ರಿಯೇಟಿವ್ ವಿದ್ಯಾ ಸಂಸ್ಥೆಯ ಸಹ ಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿ ಶಿಬಿರದ ಆಯೋಜನೆಯ ಉದ್ದೇಶ ಮತ್ತು ನಾಗರಿಕ ಸಮುದಾಯಗಳ ಪ್ರಗತಿ, ಊರಿನವರ ಸಹಕಾರ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಊರಿನ ಗಣ್ಯರಲ್ಲಿ ಶಿಬಿರದ ಎಲ್ಲ ಕೆಲಸ ಕಾರ್ಯಗಳಲ್ಲಿ ತನು-ಮನ-ಧನ ಸಹಾಯ ಮತ್ತು ಸಹಕಾರ ಕೋರಿದರು.
ಶಿಬಿರದ ಸಂಯೋಜಕರಾದ ಉಪನ್ಯಾಸಕ ಉಮೇಶ್ ರವರು ಪೂರ್ವ ತಯಾರಿ ಮತ್ತು ಶಿಬಿರದಲ್ಲಿ ಅಗತ್ಯತೆ ಮತ್ತು ಖರ್ಚು ವೆಚ್ಚಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪಂಚಾಯತ್ ಮಾಜಿ ಅಧ್ಯಕ್ಷ ಸಂತೋಷ ಶೆಟ್ಟಿ, ಉದ್ಯಮಿ-ಚೇತನ್ ಶೆಟ್ಟಿ, ಸರ್ವೋತ್ತಮ ಕಡಂಬ, ವಾಸು ಶೆಟ್ಟಿ, ಹರಿಶ್ಚಂದ್ರ ಕುಲಾಲ್, ಚಂದ್ರಶೇಖರ ಹೆಗ್ಡೆ, ಕೆ ಶಾಂತರಾಮ್ ಹೆಗ್ಡೆ, ಮಹಾವೀರ ಕಡಂಬ ಹಾಗೂ ವಿವಿಧ ಸಂಘ ಸಂಸ್ಥೆಗಳ ಗಣ್ಯರು ಉಪಸ್ಥಿತರಿದ್ದು ಸಂಪೂರ್ಣ ಸಹಕಾರದ ಭರವಸೆ ನೀಡಿದರು.