ಈದ್ ಮಿಲಾದ್ ಹೆಸರಿನಲ್ಲಿ ಶಿವಮೊಗ್ಗದಲ್ಲಿ ಕಳೆದ 3 ದಿನಗಳ ಹಿಂದೆ ನಡೆದ ಗಲಭೆಯು ಒಂದು ಷಡ್ಯಂತ್ರವಾಗಿರುವ ಎಲ್ಲಾ ಕುರುಹುಗಳು ಗೋಚರಿಸುತ್ತಿವೆ. ಆದ್ದರಿಂದ ಈದ್‌ಮಿಲಾದ್ ನೆಪದಲ್ಲಿ ಶಿವಮೊಗ್ಗದ ಶಾಂತಿ ಕೆಡಿಸಿದ ಜಿಹಾದಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ.
ಮತಾಂಧರ ಅಟ್ಟಹಾಸಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅನೇಕ ಬಡ ಜನರ ಆಸ್ತಿ ಪಾಸ್ತಿಗಳ ಮೇಲೆ ಅಪಾರ ಹಾನಿಯುಂಟಾಗಿದ್ದು ಅಲ್ಲಿನ ಜನರು 3 ದಿನಗಳಿಂದ ದುಃಖದ ಮಡಿಲಿನಲ್ಲಿದ್ದಾರೆ. ಶಿವಮೊಗ್ಗವು ಅತ್ಯಂತ ಕೋಮು ಸೂಕ್ಷ್ಮ ಪ್ರದೇಶವೆಂದು ತಿಳಿದಿದ್ದೂ ಇದು ಸಣ್ಣ ಘಟನೆ ಎಂದು ಉನ್ನತ ಸ್ಥಾನದಲ್ಲಿರುವ ಗೃಹ ಸಚಿವರು ಹೇಳುತ್ತಾರೆ, ಪೊಲೀಸರ ಮೇಲೆ ಕಲ್ಲು ಹೊಡೆಯುವುದು ಸಣ್ಣ ಘಟನೆಯೇ ? ಎಂಬ ಪ್ರಶ್ನೆ ನಿರ್ಮಾಣವಾಗುತ್ತದೆ.
ಒಟ್ಟಾರೆ ಸಮಾಜಕ್ಕೆ ಕಂಟಕ ತರುವ ಅತ್ಯಂತ ಗಂಭೀರ ಘಟನೆಗಳು ನಡೆದ ಮೇಲೂ ನಾಯಕರ ನಿರ್ಲಕ್ಷ್ಯತನದ ಹೇಳಿಕೆಗಳು ರಾಜ್ಯದ ರಕ್ಷಣೆಗೆ ಕುತ್ತು ತರುವಂತಿದೆ. ಹಾಗಾಗಿ ಆರೋಪಿಗಳನ್ನು ಬಂದಿಸುವುದಕ್ಕೆ ಮಾತ್ರ ಸೀಮಿತಗೊಳಿಸದೆ ಕೂಡಲೇ ಸರಕಾರವು ಈ ಘಟನೆಯನ್ನು ಎಸ್‌ಐಟಿ ತನಿಖೆಗೆ ಒಳಪಡಿಸಿ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯುಂಟು ಮಾಡಿದ ಮತಾಂಧರ ಮನೆಗಳನ್ನು ಮುಟ್ಟುಗೋಲು ಮಾಡಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ.