ಹೆಬ್ರಿ : ತಾಲೂಕಿನ ವರಂಗ ಗ್ರಾಮದ ಮುನಿಯಾಲಿನಲ್ಲಿರುವ ಗುರುರಾಜ್ ಎಕ್ಸ್ ಪೋರ್ಟ್ ಗೇರುಬೀಜ ಫ್ಯಾಕ್ಟರಿಯಲ್ಲಿ 24 ಲಕ್ಷ ರೂ ಮೌಲ್ಯದ ಗೇರು ಬೀಜವನ್ನು ಕಳ್ಳರು ಕಳಗೈದಿರುವ ಘಟನೆ ನಡೆದಿದೆ.
ಕಾರ್ಖಾನೆಯ ಮಾಲೀಕರು ಕಳೆದ ಸೆಪ್ಟಂಬರ್ 18ರಂದು ಸಂಜೆ 7 ಗಂಟೆಗೆ ಗೇರುಬೀಜ ಕಾರ್ಖಾನೆಗೆ ಬೀಗ ಹಾಕಿ ಮನೆಗೆ ಹೋಗಿದ್ದು ಸೆಪ್ಟೆಂಬರ್ 20ರಂದು ಕಾರ್ಖಾನೆಯ ಬೀಗ ತೆಗೆದು ಒಳ ಹೋದಾಗ ಗೇರು ಬೀಜದ ಬಾಕ್ಸ್ ಗಳು ಕಡಿಮೆ ಇರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ 24 ಲಕ್ಷ ರೂ ಮೌಲ್ಯದ ಸುಮಾರು 3570 ಕೆಜಿ ಗೇರುಬೀಜ ಕಳುವಾಗಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಕಾರ್ಖಾನೆಯ ಪಾಲುದಾರರಾದ ಎಂ ಅರವಿಂದ ಮಲ್ಯ ಅವರು ಹೆಬ್ರಿ ಪೊಲೀಸ್ ಠಾಣೆಗೆ ತಡವಾಗಿ ದೂರು ನೀಡಿದ್ದಾರೆ.