ಕಾರ್ಕಳ: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗಸAಸ್ಥೆಯಾಗಿರುವ ದೇರಳಕಟ್ಟೆಯ ಪ್ರತಿಷ್ಟಿತ ಜಸ್ಟೀಸ್ ಕೆ. ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ಮತ್ತು ಅಂಧರ ಸೇವಾ ಸಂಘ, ದಕ್ಷಿಣ ಕನ್ನಡ (ರಿ), ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘ ಇವರ ಜಂಟಿ ಆಶ್ರಯದಲ್ಲಿ ಅ. 8 ರಂದು ಭಾನುವಾರ ಬೆಳಿಗ್ಗೆ 10.00 ರಿಂದ 1.00 ರವರೆಗೆ ಮುಂಡ್ಕೂರಿನ ನಡಿಗುತ್ತು ಸಿದ್ದು ಶೆಟ್ಟಿ ಆರೋಗ್ಯ ಕೇಂದ್ರದಲ್ಲಿ ಕಣ್ಣಿನ ತಪಾಸಣೆ, ಮಧುಮೇಹ, ರಕ್ತದೊತ್ತಡ ಹಾಗೂ ಸಾಮಾನ್ಯ ಖಾಯಿಲೆಗಳ ‘ಉಚಿತ ಆರೋಗ್ಯ ತಪಾಸಣಾ ಶಿಬಿರ’ವನ್ನು ಹಮ್ಮಿಕೊಳ್ಳಲಾಗಿದೆ.
ವೈದ್ಯರು ಸೂಚಿಸಿದವರಿಗೆ ಇ.ಸಿ.ಜಿ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುವುದು. ಸಾಮಾನ್ಯ ಔಷಧಗಳನ್ನು ಉಚಿತವಾಗಿ ನೀಡಲಾಗುವುದು. ಸಾಮಾನ್ಯ ಮತ್ತು ನಿಯಮಿತ ಕನ್ನಡಕವನ್ನು ಉಚಿತವಾಗಿ ವಿತರಿಸಲಾಗುವುದು. ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಲಾಗುವುದು.
ಶಿಬಿರದಲ್ಲಿ ಕ್ಷೇಮ ಹೆಲ್ತ್ ಕಾರ್ಡ್ ನೋಂದಾವಣೆ ಮಾಡಲಾಗುವುದು. ಕ್ಷೇಮ ವಿಮಾ ಯೋಜನೆಯ ನೊಂದಾವಣೆಗೆ ಬೇಕಾಗುವ ದಾಖಲೆಗಳು: 1. ವಿಮಾ ಯೋಜನೆಗೆ ಸೇರುವ ಎಲ್ಲಾ ಸದಸ್ಯರ ಆಧಾರ್ ಕಾರ್ಡಿನ ಜೆರಾಕ್ಸ್. 2. ರೇಷನ್ ಕಾರ್ಡಿನ ಜೆರಾಕ್ಸ್. 3. ಸಣ್ಣ ಮಕ್ಕಳಾದಲ್ಲಿ ಜನನ ಪತ್ರದ ಜೆರಾಕ್ಸ್
ಹೆಚ್ಚಿನ ಮಾಹಿತಿಗಾಗಿ: ರವಿ- 9482099110, ಸುನಿಲ್ ಶೆಟ್ಟಿ- 8657174589. ಸಂಪರ್ಕಿಸಬಹುದು.