Share this news

ಹ್ಯಾಂಗ್ ಝೂ: ಚೀನಾದ ಹ್ಯಾಂಗ್ ಝೂನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಪ್ರಪ್ರಥಮ ಬಾರಿಗೆ 100 ಪದಕಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.
ಮಹಿಳಾ ವಿಭಾಗದ ಕಬಡ್ಡಿ ಪಂದ್ಯದಲ್ಲಿ ಚಿನ್ನ ಗೆಲ್ಲುವ ಮೂಲಕ ಭಾರತವು ಇಲ್ಲಿಯವರೆಗೆ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ 100 ಪದಕಗಳನ್ನು ಗೆದ್ದ ಸಾಧನೆ ಮಾಡಿದೆ.
2023 ರ ಆವೃತ್ತಿಯು ಏಷ್ಯನ್ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತದ ಅತ್ಯುತ್ತಮ ಆವೃತ್ತಿ ಮಾತ್ರವಲ್ಲ, ಭಾರತವು ಪದಕ ಗೆಲ್ಲುವಲ್ಲಿ ಮೂರು ಅಂಕಿಯ ಗಡಿಯನ್ನು ಮುಟ್ಟುತ್ತಿರುವುದು ಇದೇ ಮೊದಲು.ಕ್ರೀಡಾಳುಗಳ ಇ ಸಾಧನೆಗೆ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದೆ.
ಹಿಂದೆ 2018ರ ಏಷ್ಯನ್ ಗೇಮ್ಸ್ ನಲ್ಲಿ ಭಾರತ 70 ಪದಕಗಳನ್ನು ಜಯಿಸಿತ್ತು.ಇದೀಗ ಬರೋಬ್ಬರಿ 100 ಪದಕಗಳನ್ನು ಗೆದ್ದು ಮುಂದೊಂದು ದಿನ ಭಾರತವು ಚೀನಾವನ್ನು ಹಿಂದಕ್ಕಿ ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೂ ಅಚ್ಚರಿಯಿಲ್ಲ.

ಭಾರತೀಯ ಕ್ರೀಡಾಳುಗಳ ಸಾಧನೆಗೆ ಪ್ರಧಾನಿ ಮೋದಿ ಅಭಿನಂದನೆ

ಏಷ್ಯನ್ ಗೇಮ್ಸ್ ನಲ್ಲಿ ನಮ್ಮ ಕ್ರೀಡಾಪಟುಗಳು ಮಾಡಿರುವ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದು, ಅಸಾಮಾನ್ಯ,ದೇಶಪ್ರೇಮ ಹಾಗೂ ಸಮರ್ಪಣಾ ಮನೋಭಾವದಿಂದ ಆಡಿ ಪದಕ ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ.ಈ ಸಾಧನೆಯು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡಲಿ ಕಠಿಣ ಪರಿಶ್ರಮ ಮತ್ತು ಉತ್ಸಾಹದಿಂದ ಏನು ಬೇಕಾದರೂ ಸಾಧ್ಯ ಎಂದು ನಮ್ಮ ಹೆಮ್ಮೆಯ ಕ್ರೀಡಾಪಟುಗಳು ಸಾಧಿಸಿ ತೋರಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ

 

 

 

 

 

 

 

 

Leave a Reply

Your email address will not be published. Required fields are marked *