ಜೆರುಸಲೇಂ: ಪ್ಯಾಲೆಸ್ತೇನಿಯಾದ ಹಮಾತ್ ಉಗ್ರರ ಸಂಘಟನೆಯು ಇಸ್ರೇಲ್ ಮೇಲೆ ನಡೆಸಿದ ಹಠಾತ್ ದಾಳಿಯ ಬಳಿಕ ಇಸ್ರೇಲ್ ಮಿಲಿಟರಿ ಪಡೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ.
ಹಮಾಸ್ ಉಗ್ರರ ನೆಲೆಗಳ ಮೇಲೆ ಮುಗಿಬಿದ್ದ ಇಸ್ರೇಲ್ ಸೇನಾಪಡೆಗಳು ವಾಯುದಾಳಿ ನಡೆಸಿ ಬಾಂಬ್ ಗಳ ಮಳೆ ಸುರಿಸಿವೆ. ಇದೀಗ ಭೀಕರ ಹೋರಾಟದ ನಾಲ್ಕನೇ ದಿನಕ್ಕೆ ಸಂಖ್ಯೆ 3 ಸಾವಿರ ಗಡಿಯನ್ನು ದಾಟಿದ್ದು, ಗಾಜಾ ಗಡಿ ಪ್ರದೇಶಗಳನ್ನು ಹಮಾಸ್ ಉಗ್ರರಿಂದ ವಶಪಡಿಸಿಕೊಂಡಿರುವುದಾಗಿ ಇಸ್ರೇಲ್ ಹೇಳಿದೆ.
ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಶನಿವಾರದ ದಾಳಿಯ ನಂತರ ಇಸ್ರೇಲ್‌ನ ಮಿಲಿಟರಿ ಕಾರ್ಯಾಚರಣೆ ಇನ್ನಷ್ಟು ತೀವೃಗೊಳಿಸುವುದಾಗಿ ಎಚ್ಚರಿಸಿದ್ದಾರೆ. ಯಹೂದಿ ಸಬ್ಬತ್‌ನಲ್ಲಿ ಹಮಾಸ್ ತನ್ನ ಭೂಮಿ, ವಾಯು ಮತ್ತು ಸಮುದ್ರದ ದಾಳಿಯನ್ನು ಪ್ರಾರಂಭಿಸಿದ ಜನನಿಬಿಡ ಪ್ರದೇಶವಾದ ಗಾಜಾಕ್ಕೆ ಇಸ್ರೇಲಿ ನೆಲದ ಆಕ್ರಮಣದ ನಿರೀಕ್ಷೆಗಳ ನಡುವೆ ಪ್ರಾದೇಶಿಕ ದಹನದ ಭಯವು ಹೆಚ್ಚಿದೆ. ಇಸ್ರೇಲ್‌ನ 75 ವರ್ಷಗಳ ಇತಿಹಾಸದಲ್ಲಿ ಅತ್ಯಂತ ಕೆಟ್ಟ ದಾಳಿಯಿಂದ ಸಾವಿನ ಸಂಖ್ಯೆ 900ರ ಗಡಿ ದಾಟಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಇದಕ್ಕೆ ಪ್ರತ್ಯುತ್ತರವಾಗಿ ಇಸ್ರೇಲ್ ಪಡೆಗಳು ಹಮಾಸ್ ಉಗ್ರರ ನೆಲೆಗಳನ್ನು ಬುಡಸಹಿತ ನಿರ್ನಾಮ ಮಾಡುವ ತನಕ ಕಾರ್ಯಾಚರಣೆ ನಿಲ್ಲಿಸುವುದಿಲ್ಲ, ಯುದ್ದವನ್ನು ಆರಂಭಿಸಿರುವುದು ಹಮಾಸ್, ನಮ್ಮ ಕೆಣಕಿ ಅಮಾಯಕರ ಸಾವಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಮ್ಮ ಹೋರಾಟ ನಿಲ್ಲದು,ಅಲ್ಲದೇ ಯುದ್ದವನ್ನು ಮುಗಿಸುವುದು ನಾವೇ ಎಂದು ಇಸ್ರೇಲ್ ಪ್ರಧಾನಿ ಗುಡುಗಿದ್ದಾರೆ