ಬೆಂಗಳೂರು: ರೇಷನ್ ಕಾರ್ಡ್ ಇದ್ದರೂ ರೇಷನ್ ಪಡೆಯದ ಕಾರ್ಡ್ದಾರರಿಗೆ ಆಹಾರ ಇಲಾಖೆ ಬಿಗ್ ಶಾಕ್ ಕೊಟ್ಟಿದ್ದು, 6 ತಿಂಗಳಿಂದ ಪಡಿತರ ಪಡೆಯದವರ ರೇಷನ್ ಕಾರ್ಡ್ ಅಮಾನತು ಮಾಡಲು ಮುಂದಾಗಿದೆ.
ಈ ನಿಯಮ ಅಂತ್ಯೋದಯ, ಬಿಪಿಎಲ್, ಪಿಹೆಚ್ಹೆಚ್ ಕಾರ್ಡ್ಗೆ ಅನ್ವಯಿಸುತ್ತದೆ. ಸದ್ಯ ಆರು ತಿಂಗಳಿಂದ ಒಟ್ಟು 3.26 ಲಕ್ಷ ಜನ ಪಡಿತರ ಪಡೆದಿಲ್ಲ. ಆಹಾರ ಇಲಾಖೆ ಪಡಿತರ ಪಡೆಯದ ಕಾರ್ಡ್ಗಳ ಡೇಟಾ ಸಂಗ್ರಹಿಸಿ ಕಾರ್ಡ್ ಅಮಾನತಿಗೆ ಆದೇಶ ನೀಡಿದೆ.
ಅಕ್ಕಿ ಪಡೆದಿಲ್ಲದೇ ಇರುವ ಬಗ್ಗೆ ಆಹಾರ ಇಲಾಖೆ ಡೇಟಾ ಕಲೆಕ್ಟ್ ಮಾಡಿಕೊಂಡಿದ್ದು ಈ ಕಾರ್ಡ್ಗಳ ಅಮಾನತಿಗೆ ಆದೇಶಿಸಿದೆ. ಈ ವಾರದಲ್ಲಿ 3.26 ಲಕ್ಷ ಕಾರ್ಡ್ಗಳು ಸಸ್ಪೆಂಡ್ ಆಗಲಿವೆ. ಕಳೆದ ಎರಡು ತಿಂಗಳ ಹಿಂದೆ ಮೃತಪಟ್ಟ ಕಾರ್ಡ್ ಹೊಂದಿರುವ ಫಲಾನುಭವಿಗಳ ಹೆಸರು ಡಿಲೀಟ್ ಮಾಡಿ ರೇಷನ್ ಕಾರ್ಡ್ ಫಲಾನುಭವಿಗಳಿಗೆ ಆಹಾರ ಇಲಾಖೆ ಶಾಕ್ ಕೊಟ್ಟಿತ್ತು. ಇದೀಗ ಕಳೆದ ಆರು ತಿಂಗಳಿನಿಂದ ಅಕ್ಕಿ ಪಡೆಯದ ರೇಷನ್ ಕಾರ್ಡ್ಗಳನ್ನು ಸಸ್ಪೆಂಡ್ ಮಾಡಲು ಆದೇಶ ಹೊರಡಿಸಿದೆ.
ಅಂತ್ಯೋದಯ, ಪಿಹೆಚ್ಹೆಚ್ ಹಾಗೂ NPHH ನಲ್ಲಿ ಒಟ್ಟು 1,52,79,343 ರಷ್ಟು ಕಾರ್ಡ್ಗಳಿದ್ದು ಒಟ್ಟು 52,34,148 ರಷ್ಟು ಫಲಾನುಭವಿಗಳಿದ್ದಾರೆ. ಇನ್ನು ಬಿಪಿಎಲ್ನಲ್ಲಿ 1,27,82,893 ಕಾರ್ಡ್ಗಳಿದ್ದು ಒಟ್ಟು 4,37,65,128 ರಷ್ಟು ಫಲಾನುಭವಿಗಳಿದ್ದಾರೆ. ಇದರಲ್ಲಿ ಒಟ್ಟು 3 ಲಕ್ಷದ 26 ಸಾವಿರ ಕಾರ್ಡ್ ಗಳನ್ನ ಸಸ್ಪೆಂಡ್ ಮಾಡುವುದಕ್ಕೆ ಸರ್ಕಾರ ಮುಂದಾಗಿದೆ. ಈ ಕಾರ್ಡ್ ಸಸ್ಪೆಂಡ್ ನಂತರ ಹೊಸ ಕಾರ್ಡ್ ಗಳಿಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ. ಸದ್ಯ ಅಕ್ಕಿಪಡೆಯದ ಫಲಾನುಭವಿಗಳ ಕಾರ್ಡ್ಗಳನ್ನ ತನಿಖೆ ನಡೆಸಿ ಸಸ್ಪೆಂಡ್ ಮಾಡುವುದಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.
ಭಾರತದಲ್ಲಿ ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ಕೋರಿ ಹಾಕಲಾಗಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ರಚನೆ ಮಾಡಿತ್ತು.
ಮದುವೆಯು ಹಲವಾರು ಹಕ್ಕುಗಳು, ಸವಲತ್ತುಗಳು ಮತ್ತು ಕಟ್ಟುಪಾಡುಗಳನ್ನು “ಕಾನೂನಿಂದ ಪಾಲಿಸಲಾಗಿದೆ ಮತ್ತು ರಕ್ಷಿಸುತ್ತದೆ” ಎಂದು ಅರ್ಜಿಗಳು ವಾದಿಸಿದ್ದವು. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ದೆಹಲಿ ಆಯೋಗವು (ಆಅPಅಖ) ಈ ರೀತಿಯ ಮದುವೆಗಳನ್ನು ಗುರುತಿಸುವಂತೆ ತಿಳಿಸಿದೆ. ಮಕ್ಕಳ ಮೇಲೆ ಇಂತಹ ವಿವಾಹಗಳ ಪ್ರಭಾವದ ಕುರಿತು ನ್ಯಾಯಾಲಯಕ್ಕೆ ಸಹಾಯ ಮಾಡಲು ಮಧ್ಯಸ್ಥಿಕೆ ಅರ್ಜಿಯನ್ನು ಸಲ್ಲಿಕೆ ಮಾಡಿತ್ತು.