ಬೆಂಗಳೂರು: ರಾಜ್ಯ ಸರ್ಕಾರದಿಂದ ಕೆಎಸ್ ಆರ್ ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಸಂಸ್ಥೆಗಳಿಗೆ ಸಿಬ್ಬಂದಿ ನೇಮಕಾತಿಗೆ ಸರ್ಕಾರ ಮುಂದಾಗಿದೆ.
ಸಾರಿಗೆ ನಿಗಮಗಳಿಗೆ ಕಳೆದ 2016 ರ ಬಳಿಕ ಯಾವುದೇ ನೇಮಕಾತಿ ನಡೆದಿಲ್ಲ.ಈ ಕುರಿತಂತೆ 4 ಸಾರಿಗೆ ಸಂಸ್ಥೆಗಳಲ್ಲಿ 2016 ರಿಂದ ಸಿಬ್ಬಂದಿಗಳ ನಿವೃತ್ತಿ ಹಾಗೂ ಇತರೆ ಕಾರಣಗಳ ಹಿನ್ನಲೆಯಲ್ಲಿ 13,669 ಹುದ್ದೆಗಳು ಖಾಲಿಯಾಗಿದ್ದವು. ಇವುಗಳಲ್ಲಿ 8,719 ಹುದ್ದೆಗಳ ನೇಮಕಾತಿಗೆ ಅನುಮತಿ ನೀಡಲಾಗಿದೆ.
ಒಟ್ಟು 13 ಸಾವಿರ ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ಸಾರಿಗೆ ಸಂಸ್ಥೆಗಳಿಗೆ ಅನುಮತಿ ನೀಡುವಂತೆ ಸರ್ಕಾರವನ್ನು ಕೋರಲಾಗಿತ್ತು. ಇದೀಗ ಮೊದಲ ಹಂತದಲ್ಲಿ 6500 ಚಾಲನಾ ಸಿಬ್ಬಂದಿಗಳಿಗೆ ಹಾಗೂ 300 ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ಸರ್ಕಾರ ಒಪ್ಪಿಗೆ ನೀಡಿದೆ.
ಸಾರಿಗೆ ಸಂಸ್ಥೆಗಳ ಖಾಲಿ ಹುದ್ದೆಗಳ ವಿವರ:
ಕೆಎಸ್ಆರ್ ಟಿಸಿ – ಡ್ರೈವರ್ ಕಂ ಕಂಡಕ್ಟರ್ 2000 ಹುದ್ದೆಗಳು, ತಾಂತ್ರಿಕ ಸಿಬ್ಬಂದಿ 300 ಹುದ್ದೆಗಳು.
ಎನ್ ಡಬ್ಲ್ಯೂ ಕೆ ಆರ್ ಟಿಸಿ – ಡ್ರೈವರ್ ಕಂ ಕಂಡಕ್ಟರ್ 2000 ಹುದ್ದೆಗಳು.
ಬಿಎಂಟಿಸಿ – ಕಂಡಕ್ಟರ್ 2,500 ಹುದ್ದೆಗಳು.
ಕೆಕೆಆರ್ ಟಿಸಿ – ಕಂಡಕ್ಟರ್ 300 ಹುದ್ದೆಗಳು
ಒಟ್ಟಾರೆ 8,719 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಅನುಮತಿಸಿದೆ. ಈ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ ಅಧಿಸೂಚನೆ ಹೊರಡಿಸಲಾಗುತ್ತದೆ.ಬಳಿಕ ಉದ್ಯೋಗಾಕಾಂಕ್ಷಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.