ಚೆನ್ನೈ; ಚೆನ್ನೈನ ಚಿಪಾಕ್ ಕ್ರಿಕೆಟ್ ಸ್ಟೇಡಿಯಂನಲ್ಲಿ ವಿಶ್ವಕಪ್ ಕ್ರಿಕಟ್ ಪಂದ್ಯಾಟದಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ಅಂಬೆಗಾಲಿಡುತ್ತಿರುವ ಕ್ರಿಕೆಟ್ ಶಿಶು ಅಫ್ಘಾನಿಸ್ತಾನದ ವಿರುದ್ಧ ಪಾಕಿಸ್ತಾನ ತಂಡವು ಹೀನಾಯವಾಗಿ ಸೋತು ತೀವೃ ಮುಖಭಂಗ ಅನುಭವಿಸಿದೆ.
ಚಿಪಾಕ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕ್ ತಂಡದ ನಾಯಕ ಬಾಬರ್ ಆಝಂ ಪಡೆ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 282 ಗಳಿಸಲು ಶಕ್ತವಾಯಿತು. ಅಬುಲ್ಲಾ ಶಫೀಕ್ ಹಾಗೂ ಇಮಾಮ್ ಉಲ್ ಹಕ್ ಪಾಕಿಸ್ತಾನಕ್ಕೆ ಉತ್ತಮ ಆರಂಭ ನೀಡಿದ್ದರು, ಇಬ್ಬರು 56 ರನ್ನುಗಳ ಜತೆಯಾಟವಾಡಿ ಇಮಾಮ್ ಉಲ್ ಹಕ್ ರೂಪದಲ್ಲಿ ಪಾಕಿಸ್ತಾನ ಮೊದಲ ವಿಕೆಟ್ ಕಳೆದುಕಜೊಂಡ ಬಳಿಕ ಆರಂಭಿಕರಾದ ಅಬ್ದುಲ್ಲಾ ಶಫೀಕ್ ಜತೆ ನಾಯಕ ಬಾಬರ್ ಆಝಂ ಉತ್ತಮ ಆಟವಾಡಿ 74 ರನ್ ಗಳಿಸಿದರು. ಪಾಕ್ ಪರವಾಗಿ ಅಫ್ಘಾನ್ ಬೌಲರ್ ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಪಾಕಿಸ್ಥಾನದ ಮಧ್ಯಮ ಕ್ರಮಾಂಕದ ಆಟಗಾರರಾದ ಶಬಾದ್ ಖಾನ್ ಹಾಗೂ ಇಫ್ತಿಕಾರ್ ಅಹ್ಮದ್ ತಲಾ 40 ರನ್ನುಗಳ ಕೊಡುಗೆ ನೀಡಿದರೆ, ಮೊಹಮ್ಮದ್ ರಿಝ್ವಾನ್ ಹಾಗೂ ಸೌದ್ ಶಕೀಲ್ ಕಳಪೆ ಪ್ರದರ್ಶನ ನೀಡಿದ ಪರಿಣಾಮವಾಗಿ ಅಂತಿಮವಾಗಿ ಪಾಕಿಸ್ತಾನದ 7 ವಿಕೆಟ್ ಕಳೆದುಕೊಂಡು 282ರನ್ನುಗಳ ಸಾಧಾರಣ ಮೊತ್ತ ಕಲೆಹಾಕಿತು.
ಪಾಕಿಸ್ತಾನ ನೀಡಿದ 282 ರನ್ನುಗಳ ಗುರಿಯನ್ನು ಬೆನ್ನತ್ತಿ ಜಯಗಳಿಸಲೇ ಬೇಕೆನ್ನುವ ನಿರ್ಧಾರ ಮಾಡಿ ಆರಂಭಿಕರಾಗಿ ಕ್ರೀಸ್ ಗೆ ಇಳಿದ ರೆಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಭರ್ಜರಿ 130 ರನ್ನುಗಳ ಜತೆಯಾಟವಾಡಿ ಅಫ್ಘಾನಿಸ್ತಾನಕ್ಕೆ ಉತ್ತಮ ಅಡಿಪಾಯ ಹಾಕಿದ್ದರು. ಆರಂಭಿಕ ಗುರ್ಬಾಝ್ 65 ರನ್ನು ಗಳಿಸಿ ಮೊದಲಿಗರಾಗಿ ವಿಕೆಟ್ ಒಪ್ಪಿಸಿದರೆ ಝದ್ರಾನ್ ಭರ್ಜರಿ 87 ರನ್ನು ಗಳಿಸಿ ಅಫ್ಘಾನ್ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು. ಎರಡು ವಿಕೆಟ್ ಬಿದ್ದ ಬಳಿಕ ರಹಮತ್ ಶಾ(77) ಹಾಗೂ ನಾಯಕ ಹಶ್ಮತುಲ್ಲಾ ಶಹೀದಿ(48) ಭರ್ಜರಿ ಜತೆಯಾಟವಾಡಿ 49ನೇ ಓವರ್ ನಲ್ಲಿ ಗೆಲುವಿನ ರನ್ ಬಾರಿಸಿ ಬಲಿಷ್ಠ ಪಾಕಿಸ್ತಾನದ ವಿರುದ್ಧ ದಾಖಲೆಯ ಜಯಗಳಿಸಿತು.
ಈ ಮೂಲಕ ಪಾಕಿಸ್ಥಾನ ದುರ್ಬಲ ತಂಡವಾದ ಅಫ್ಘಾನ್ ವಿರುದ್ಧ ಹೀನಾಯವಾಗಿ ಸೋತು ತೀವೃ ಮುಖಭಂಗ ಅನುಭವಿಸಿತು.