Share this news

ಕಾರ್ಕಳ: ಹಿರಿಯ ಪತ್ರಕರ್ತ ಹಾಗೂ ಸಾಹಿತಿ ದಿ.ಶೇಖರ ಅಜೆಕಾರು ಅವರ ನಿಧನದ ಪ್ರಯುಕ್ತ ಗೌರವಾರ್ಥ ಶ್ರದ್ಧಾಂಜಲಿ ಸಭೆ ಹಾಗೂ ಅವರ ಕುಟುಂಬಕ್ಕೆ ಆರ್ಥಿಕ ನೆರವು ಸಂಗ್ರಹದ ಅಂಗವಾಗಿ ನಾಳೆ ನ.6 ರಂದು ಸಂಜೆ 5 ಘಂಟೆಗೆ ಕಾರ್ಕಳ ಹೊಟೇಲ್ ಪ್ರಕಾಶ್ ನಲ್ಲಿ ನಡೆಯಲಿದೆ.

ಸಾಹಿತ್ಯದ ಕುರಿತಾಗಿ ಅಪಾರ ಆಸಕ್ತಿ ಹೊಂದಿದ್ದ ಶೇಖರ ಅಜೆಕಾರು ಅವರು ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ಕಳೆದ 35 ವರ್ಷಗಳಿಂದ ನಿರಂತರವಾಗಿ ಕನ್ನಡ ಸಾಹಿತ್ಯದ ಕುರಿತಾದ ಹಲವಾರು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿ ಕನ್ನಡಕ್ಕೆ ತನ್ನದೇ ಕೊಡುಗೆ ಸಲ್ಲಿಸಿದ್ದರು.
ಪತ್ರಕರ್ತನಾಗಿ ಜತೆಜತೆಗೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತನ್ನ ಜೀವನವನ್ನು ಮೀಸಲಿಟ್ಟ ಶೇಖರ ಅಜೆಕಾರು ಅವರು
ತನಗೆ ಹಾಗೂ ತನ್ನ ಕುಟುಂಬಕ್ಕಾಗಿ ಸಂಪಾದಿಸಿರುವುದು ಕೇವಲ ಪುಸ್ತಕ ಭಂಡಾರ ಮತ್ತು ಅಪಾರ ಅಭಿಮಾನಿಗಳನ್ನು ಮಾತ್ರ. ಶೇಖರ್ ಅಜೆಕಾರು ಅವರ ಪುಟ್ಟ ಮಕ್ಕಳು ಹಾಗೂ ಕುಟುಂಬಕ್ಕೆ ಆರ್ಥಿಕ ಸಹಕಾರ ನೀಡುವ ನಿಟ್ಟಿನಲ್ಲಿ ಫೆಡರೇಷನ್ ಆಫ್ ಕ್ವಾರಿ ಮತ್ತು ಕ್ರಷರ್ ಮಾಲಕರ ಸಂಘದ ರಾಜ್ಯಧ್ಯಕ್ಷರಾದ ಡಾ. ರವೀಂದ್ರ ಶೆಟ್ಟಿಯವರ ನೇತೃತ್ವದಲ್ಲಿ ಶ್ರದ್ಧಾಂಜಲಿ ಸಭೆ ಹಾಗೂ ಆರ್ಥಿಕ ಧನಸಹಾಯ ಸಂಗ್ರಹಣೆಗಾಗಿ ಸಭೆ ಆಯೋಜಿಸಲಾಗಿದ್ದು ಈ ಸಭೆಯಲ್ಲಿ ಎಲ್ಲಾ ಸಾಹಿತಿಗಳು, ಪತ್ರಕರ್ತರು ಹಾಗೂ ಪತ್ರಿಕಾ ರಂಗದಲ್ಲಿ ಪ್ರೀತಿ ಇಟ್ಟವರು ಆಗಮಿಸುವಂತೆ ಅವರು ವಿನಂತಿಸಿಕೊಂಡಿದ್ದಾರೆ. ಮಾಡಿದ ಅವರು ಈ ನಿಟ್ಟಿನಲ್ಲಿ ನಾವು ಪತ್ರಿಕಾ ಸೇವೆ ಮಾಡೋಣ ಎಂದು ಹೇಳಿದ್ದಾರೆ.
ಯಾವುದೇ ಕ್ಷೇತ್ರವೇ ಇರಲಿ, ಓರ್ವ ವ್ಯಕ್ತಿ ಬೆಳೆಯಬೇಕಾದರೆ ಪತ್ರಿಕಾ ರಂಗ ಹಾಗೂ ಪತ್ರಕರ್ತ ನ ಸಹಕಾರ ಅಗತ್ಯ. ಈ ಕ್ಷೇತ್ರದ ಸಹಕಾರ ಪಡೆದ ನಾವು, ಆ ಕ್ಷೇತ್ರದಲ್ಲಿ ಪತ್ರಕರ್ತರಿಗೆ ಯಾವುದೇ ತೊಂದರೆ ಆದರೆ ನಾವೆಲ್ಲರೂ ಒಗ್ಗೂಡಿ ಸಹಕಾರ ನೀಡಬೇಕು ಎಂದು ರವೀಂದ್ರ ಶೆಟ್ಟಿ ಮನವಿ ಮಾಡಿದ್ದಾರೆ.

 

 

 

 

 

 

 

 

Leave a Reply

Your email address will not be published. Required fields are marked *