Share this news

ವಯನಾಡ್‌: ಮೊಬೈಲ್‌ ಚಾರ್ಜ್‌ ಮಾಡಿಕೊಳ್ಳಲು ನಕ್ಸಲರು ಮನೆಯೊಂದಕ್ಕೆ ಬಂದಿರುವ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ ಪರಿಣಾಮ ಪೊಲೀಸರು ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ.

ಕರ್ನಾಟಕ-ಕೇರಳದ ಗಡಿ ಪ್ರದೇಶವಾದ ವಯನಾಡ್‌ ಜಿಲ್ಲೆಯ ಪೆರಿಯಾ ಪ್ರದೇಶದ ಬಳಿ ಕೇರಳ ಪೊಲೀಸರು ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಇಬ್ಬರು ನಕ್ಸಲರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ ಕಾರ್ಯಾಚರಣೆ ವೇಳೆ ಮೂವರು ನಕ್ಸಲರು ಪರಾರಿಯಾಗಿದ್ದಾರೆ.
ಐವರು ನಕ್ಸಲರು ಮನೆಯೊಂದಕ್ಕೆ ಬಂದು ತಮ್ಮ ಮೊಬೈಲ್‌ಗಳನ್ನು ಚಾರ್ಜ್‌ ಮಾಡಿಕೊಳ್ಳುತ್ತಿದ್ದರು. ಇದರ ಸುಳಿವು ವಿಶೇಷ ಕಾರ್ಯಾಚರಣೆ ಪಡೆ (ಎಸ್‌ಒಜಿ) ಪೊಲೀಸರಿಗೆ ಸಿಕ್ಕಿದ್ದು, ನಕ್ಸಲರ ಮೇಲೆ ದಾಳಿ ನಡೆಸಿದ್ದಾರೆ. ಆಗ ಗುಂಡಿನ ಕಾಳಗ ನಡೆದಿದೆ. ಬಳಿಕ ಚಂದ್ರು ಹಾಗೂ ಉನ್ನಿಮಾಯಾ ಎಂಬ ಇಬ್ಬರು ನಕ್ಸಲರನ್ನು ಪೊಲೀಸರು ಬಂಧಿಸಿದ್ದಾರೆ ಹಾಗೂ ಹತ್ತಿರದ ಪೊಲೀಸ್‌ ಕ್ಯಾಂಪ್‌ಗೆ ಹೆಚ್ಚಿನ ವಿಚಾರಣೆಗಾಗಿ ಕರೆದೊಯ್ದಿದ್ದಾರೆ. ಈ ವೇಳೆ ಮೂವರು ಪರಾರಿಯಾಗಿದ್ದಾರೆ.
ಕಳೆದ ತಿಂಗಳೂ ಸಹ ನಕ್ಸಲರು ವಯನಾಡ್‌ನ ಮಕ್ಕಿಮಾಳ ಬಳಿಯ ರೆಸಾರ್ಟ್‌ ಒಂದಕ್ಕೆ ನುಗ್ಗಿ ಅಲ್ಲಿನ ಸಿಬ್ಬಂದಿಯ ಮೊಬೈಲ್‌ನಿಂದ ಹಲವು ಪತ್ರಕರ್ತರಿಗೆ ಎಸ್ಟೇಟ್‌ ಕಾರ್ಮಿಕರ ಕಷ್ಟದ ಬಗ್ಗೆ ಸಂದೇಶಗಳನ್ನು ಕಳಿಸಿದ್ದರು. ಬಳಿಕ ಅವರ ವಿರುದ್ಧ ದೇಶದ್ರೋಹ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

 

 

 

 

 

 

 

 

Leave a Reply

Your email address will not be published. Required fields are marked *