Share this news

ಕಾರ್ಕಳ:ಸಾಣೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಅಗತ್ಯತೆಯ ಕುರಿತು ಮಾಹಿತಿ ಕಾರ್ಯಕ್ರಮವು ನಡೆಯಿತು.

ಕಾಲೇಜಿನ ಪ್ರಾಂಶುಪಾಲರಾದ ಸುಚೇತಾ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕಾರ್ಕಳ ನಗರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಪ್ರತಾಪ್ ವಿದ್ಯಾರ್ಥಿಗಳಿಗೆ ಮಾನಸಿಕ ಅಸ್ವಸ್ಥತೆಯ ಬಗ್ಗೆ ವಿವರಿಸಿ, ಪ್ರಸಕ್ತ ಕಾಲದಲ್ಲಿ ಒತ್ತಡದ ಬದುಕಿನಲ್ಲಿ ಮಾನಸಿಕ ಅನಾರೋಗ್ಯಕ್ಕೆ ಕಾರಣಗಳನ್ನು ವಿವರಿಸಿದರು.ಅತಿಯಾದ ನಿರೀಕ್ಷೆ ,ಒಂಟಿತನ, ಸಂಬಂಧ ಗಳಲ್ಲಿ ಬಿರುಕು,ಪ್ರೇಮ ವೈಫಲ್ಯ, ದುರಭ್ಯಾಸಗಳು,ಆಹಾರ ಪದ್ಧತಿ, ಭಾವನೆಗಳನ್ನು ಅದುಮಿಟ್ಟು ಕೊರಗುವಿಕೆ ,ಕೋಪ, ದ್ವೇಷ, ಕೀಳರಿಮೆ, ಜಾಲತಾಣಗಳ ಮಿತಿಮೀರಿದ ಬಳಕೆ ಮುಂತಾದವು ಹೇಗೆ ಮಾನಸಿಕ ತೊಂದರೆಗಳಿಗೆ ಕಾರಣವಾಗುತ್ತವೆ ಇದರಿಂದ ಆಗುವ ಅನಾರೋಗ್ಯದ ಬಗ್ಗೆ ಹಾಗೂ ಪರಿಣಾಮಗಳ ಬಗ್ಗೆ,ನಿವಾರಣಾ ಕ್ರಮಗಳ ಬಗ್ಗೆ ಮಾಹಿತಿ ನೀಡಿ,ಕ್ರಿಯಾಶೀಲ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಸುಚೇತಾ ಕಾಮತ್ ಸ್ವಾಗತಿಸಿ, ಆಂಗ್ಲಭಾಷಾ ಉಪನ್ಯಾಸಕಿ ಡಾ. ಸುಮತಿ ಪಿ ವಂದಿಸಿದರು.ಇತಿಹಾಸ ಉಪನ್ಯಾಸಕಿ ಸೀಮಾ ರೈ, ಮಹಿಳಾ ಪೊಲೀಸ್ ಪೇದೆ ಅಕ್ಷತಾ ಸಹಕರಿಸಿದರು ‌

 

 

 

 

 

 

 

 

Leave a Reply

Your email address will not be published. Required fields are marked *