ತೀರ್ಥಹಳ್ಳಿ: ಸನಾತನ ಧರ್ಮಕ್ಕೆ ಅದರದ್ದೇ ಆದ ಮೂಲ ಕೃತಿಗಳಿಲ್ಲ. ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಪುಸ್ತಕಗಳಲ್ಲಿ ಸನಾತನ ಧರ್ಮದ ಇತಿಹಾಸ ಹುಡುಕಿದರೂ ಸಿಗಲಿಲ್ಲ. ಸನಾತನ ಧರ್ಮಕ್ಕೆ ಇತಿಹಾಸವೇ ಇಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ತೀರ್ಥಹಳ್ಳಿಯ ಬಾಳೇಬೈಲಿನಲ್ಲಿ ಶನಿವಾರ ತಾಲೂಕು ಕಸಾಪ ಘಟಕ ಹೊಸದಾಗಿ ನಿರ್ಮಿಸಿದ ಕನ್ನಡ ಭವನ ಉದ್ಘಾಟಿಸಿ ಮಾತನಾಡಿದ ಅವರು,
ವೇದ, ಉಪನಿಷತ್ತು, ರಾಮಾಯಣ,ಮಹಾಭಾರತ, ಮನುಸ್ಮೃತಿ ಒಳಗೊಂಡು ಸನಾತನ ಧರ್ಮ ರೂಪಿಸಲಾಗಿದೆ. ಇತಿಹಾಸವೇ ಇಲ್ಲದ ಸನಾತನ ಧರ್ಮದ ಹೆಸರನ್ನು ಬಳಕೆ ಮಾಡಿ ವಿವಾದ ಎಳೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ತೀರ್ಥಹಳ್ಳಿ ತಾಲೂಕಿನಲ್ಲಿ ಹೊಸ ತಲೆಮಾರಿನ ಸಾಹಿತ್ಯ ಗ್ರಂಥ ಭಂಡಾರ ರೂಪಿಸುವ ಅಗತ್ಯ ಇದೆ. ಮಾತೃಭಾಷೆ ಪ್ರೀತಿಸುವ ಜತೆಗೆ ಆಡಳಿತ ಭಾಷೆಗೆ ಜೀವ ತುಂಬುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.
ಇತ್ತ ಸನಾತನ ಧರ್ಮದ ಕುರಿತು ವಿವಾದಿತ ಹೇಳಿಕೆ ನೀಡಿದ ಬೆನ್ನಲ್ಲೇ ಹಿಂದೂಪರ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.