Share this news

ಕಾರ್ಕಳ: ದನಗಳ್ಳತನದ ಪ್ರಕರಣಕ್ಕೆ ಪ್ರತಿಯಾಗಿ ದನ ಸಾಗಾಟಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಕಾರ್ಕಳ ನಗರ ಠಾಣೆಯಲ್ಲಿ ದೂರುಪ್ರತಿದೂರು ದಾಖಲಾಗಿದೆ.
ಕಾರ್ಕಳ ತಾಲೂಕಿನ ನೀರೆ ಗ್ರಾಮದ ದೇಲಬೆಟ್ಟು ಗರಡಿ ಬಳಿ ಭಾನುವಾ ರಾತ್ರಿ 7.45ರ ಸುಮಾರಿಗೆ ಆರೋಪಿಗಳಾದ ರವೀಂದ್ರ, ಮೋಹನ್ ನಾಯಕ್, ಬಾವು ಮಹಮ್ಮದ್ ಆಲಿ, ಮಹಮ್ಮದ್ ಪೈಝಾನ್, ಮಹಮ್ಮದ್ ಆಝಾನ್ ಎಂಬವರು ರಸ್ತೆ ಬದಿಯಲ್ಲಿದ್ದ ದನಗಳ ಗುಂಪಿನಲ್ಲಿದ್ದ ಕರುವನ್ನು ಕಳವು ಮಾಡುವ ಉದ್ದೇಶದಿಂದ ಹಿಡಿಯಲು ಯತ್ನಿಸುತ್ತಿದ್ದ ವೇಳೆ ಕರು ತಪ್ಪಿಸಿಕೊಂಡು ಓಡಿದಾಗ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಕಿಶನ್ ಎಂಬವರು ನಗರ ಠಾಣೆಗೆ ದೂರು ನೀಡಿದ್ದಾರೆ.

 

ಇದೇ ಪ್ರಕರಣಕ್ಕೆ ಸಂಬAಧಿಸಿದAತೆ ಟಾಟ ಏಸ್ ಪ್ಯಾಸೆಂಜರ್ ಚಾಲಕ ಬಾವು ಮೊಹಮ್ಮದ್ ಆಲಿ ಎಂಬವರು ನಗರ ಠಾಣೆಯಲ್ಲಿ ಪ್ರತಿದೂರು ನೀಡಿದ್ದಾರೆ. ಮೊಹಮ್ಮದ್ ಆಲಿ ತನ್ನ ಊರಿನ ಮಹಮ್ಮದ್ ಆಝಾನ್ ಎಂಬಾತ ಕಾರ್ಕಳದ ನೀರೆ ಗ್ರಾಮದಲ್ಲಿ ಖರೀದಿಸಿದ್ದ ದನಗಳನ್ನು ತರಲು ಹೋದವೇಳೆ ರಾತ್ರಿಯಾಗಿದ್ದರಿಂದ ಕತ್ತಲಿನಲ್ಲಿ ಸ್ಥಳೀಯರಾದ ರವೀಂದ್ರ ಹಾಗೂ ಮೋಹನ ನಾಯಕ್ ಸೇರಿಕೊಂಡು ದನಗಳನ್ನು ವಾಹನಕ್ಕೆ ತುಂಬಿಸಲು ಯತ್ನಿಸುತ್ತಿದ್ದಾಗ ಆರೋಪಿಗಳಾದ ಸಚಿನ್,ಅಶ್ವಥ್,ಮಹೇಶ್,ಸುರೇಶ್, ಶಿವರಾಜ ಹಾಗೂ ಮತ್ತಿತರರು ಕಾರನ್ನು ರಸ್ತೆಗೆ ಅಡ್ಡವಿರಿಸಿ ವಾಹನ ತಡೆದು ನಿಲ್ಲಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ
ಆದರೆ ಚಾಲಕ ಬಾವು ಮೊಹಮ್ಮದ್ ಆಲಿ ತನ್ನ ಪ್ಯಾಸೆಂಜರ್ ವಾಹನದಲ್ಲಿ ದನಗಳನ್ನು ಸಾಗಾಟಕ್ಕೆ ಬಂದಿರುವುದಾಗಿ ದೂರಿನಲ್ಲಿ ತಿಳಿಸಿದ್ದು, ಆದರೆ ಪ್ಯಾಸೆಂಜರ್ ವಾಹನದಲ್ಲಿ ಪ್ರಯಾಣಿಕರ ಓಡಾಟಕ್ಕೆ ಮಾತ್ರವೇ ಹೊರತು ದನಗಳನ್ನು ಅಥವಾ ಸರಕು ಸಾಗಾಟ ಮಾಡುವಂತಿಲ್ಲ ಅಲ್ಲದೇ ಕಾನೂನು ಪ್ರಕಾರ ಗೋವುಗಳ ಸಾಗಾಟಕ್ಕೆ ಪಶು ವೈದ್ಯರ ದೃಢೀಕರಣ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳ ಅನುಮತಿ ಪತ್ರ ಬೇಕಿದೆ, ಅಲ್ಲದೇ ಪೊಲೀಸರಿಗೂ ಇದರ ಮಾಹಿತಿ ನೀಡಬೇಕು. ಆದರೆ ದನ ಸಾಗಾಟ ಪ್ರಕರಣದಲ್ಲಿ ಈ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎನ್ನಲಾಗಿದೆ.

 

Leave a Reply

Your email address will not be published. Required fields are marked *