ಉಡುಪಿ: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಉಡುಪಿಯ ನೇಜಾರಿನ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಆರೋಪಿಗೆ 14 ದಿನ ಪೊಲೀಸ್ ಕಸ್ಟಡಿಗೆ ನೀಡಿ ಉಡುಪಿ ಜೆಎಂಎಫ್ಸಿ ಕೋರ್ಟ್ ಆದೇಶಿಸಿದೆ.
ಪೊಲೀಸರು ಚೌಗುಲೆಯ ಪ್ರಾಥಮಿಕ ವಿಚಾರಣೆ ನಡೆಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಅರುಣ್ ಕೆ ,ಪ್ರವೀಣ್ ಚೌಗುಲೆ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದರೂ, ಅವನ ಹೇಳಿಕೆಯನ್ನು ಪ್ರಮಾಣೀಕರಿಸಬೇಕಿದೆ. ಕೊಲೆಗಳ ಹಿಂದಿನ ಉದ್ದೇಶ ಏನು ಎಂಬುದು ಗೊತ್ತಾಗಿಲ್ಲ, ಅವನ ಹೇಳಿಕೆಯ ಪ್ರಕಾರ ಯಾವುದೋ ವೈಷಮ್ಯದಿಂದ ಅವನು, ಐನಾಜ್ ಹೆಸರಿನ ಯುವತಿಯನ್ನು ಕೊಲ್ಲಲು ಅವರ ಮನೆ ನುಗ್ಗಿದ್ದ; ಅದರೆ ಮನೆಯಲ್ಲಿದ್ದವರು ಅಕೆಯ ರಕ್ಷಣೆಗೆ ಧಾವಿಸಿದಾಗ ಉಳಿದ ಮೂವರನ್ನು ಕೊಲೆಗೈದ ಎಂದು ಹೇಳಿದ್ದಾರೆ.
ರವಿವಾರ ಬೆಳಗ್ಗೆ ಉಡುಪಿಯ ಮಲ್ಪೆ ಬಳಿಯ ನೆಜಾರ್ ನಲ್ಲಿರುವ ತೃಪ್ತಿನಗರದಲ್ಲಿ ವಾಸವಾಗಿದ್ದ ಹಸೀನಾ (46) ಎನ್ನುವವರ ಮನೆ ಹೊಕ್ಕಿದ್ದ ಚೌಗುಲೆ, ಹಸೀನಾ ಮತ್ತು ಅವರ ಮೂರು ಮಕ್ಕಳಾದ ಅಫ್ನಾನ್ (23), ಐನಾಜ್ (21) ಮತ್ತ್ತು 12 ವರ್ಷದ ಬಾಲಕ ಅಸಿಮ್ ನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ. ಈ ಪ್ರಕರಣಕ್ಕೆ ಸಂಬAಧಪಟ್ಟAತೆ ಪೊಲೀಸರು ಆರೋಪಿ ಪ್ರವೀಣ್ ಅರುಣ್ ಚೌಗಲೆ ಎಂಬಾತನನ್ನು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿಯಲ್ಲಿ ಬಂಧಿಸಿದ್ದರು.
ಇಂದು ಆರೋಪಿಯನ್ನು ವಿಚಾರಣೆ ನಡೆಸಿದ ಪೊಲೀಸರು, ಆತನನ್ನು ಕೋರ್ಟ್ಗೆ ಹಾಜರುಪಡಿಸಿದ್ದರು. ಬಳಿಕ ಉಡುಪಿ ಜೆಎಂಎಫ್ಸಿ ಕೋರ್ಟ್ 14 ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ನೀಡಿದೆ.