Share this news

ಕಾರ್ಕಳ:ನಮ್ಮ ಜೀವನವನ್ನು ಹೇಗೆ ನಿರ್ವಹಿಸಬೇಕು ಎಂಬುವುದನ್ನು ವಿದ್ಯಾರ್ಥಿ ಜೀವನದಲ್ಲಿಯೇ ನಿರ್ಣಯಿಸಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲರೂ ತಾಂತ್ರಿಕ ಶಿಕ್ಷಣ ಪಡೆಯುವ ಧಾವಂತಲ್ಲಿದ್ದಾರೆ. ಹಾರ್ಡ್ವೇರ್, ಆದರೆ ಐಟಿ,ಬಿಟಿ ತಾಂತ್ರಿಕ ಶಿಕ್ಷಣಗಳನ್ನು ಬಿಟ್ಟು ಕೃಷಿಕ್ಷೇತ್ರದತ್ತ ಆಸಕ್ತಿ ವಹಿಸಿದರೆ ಕೃಷಿ ಉತ್ಪಾದನೆಯಲ್ಲಿ ತೊಡಗಿ ಸ್ವಾವಲಂಬನೆಯ ಬದುಕನ್ನು ಕಾಣಬಹುದು.ಮುಂದೊಂದು ದಿನ ಕೃಷಿಯೇ ನಮ್ಮ ಬದುಕಿಗೆ ಆಸರೆಯಾಗಬಲ್ಲದು ಮಾತ್ರವಲ್ಲದೇ ಸ್ವಾವಲಂಬನೆ ಎನ್ನುವುದು ಬಾಲ್ಯದಿಂದಲೇ ಪ್ರಾರಂಭವಾಗಬೇಕು ಎಂದು ಎಸ್.ವಿ ಎಜ್ಯುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ಕೆ ಪಿ ಶೆಣೈ ಹೇಳಿದರು.
ಅವರು ಗುರುವಾರ ಎಸ್ ವಿ ಟಿ ವನಿತಾ ಪದವಿ ಪೂರ್ವ ಕಾಲೇಜಿನ ಪ್ರತಿಭಾ ಪುರಸ್ಕಾರದ ಅಧ್ಯಕ್ಷತೆಯನ್ನು ವಹಿಸಿ, ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ರೈತ ಸಂಘ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ವೆಲೇರಿಯನ್ ಲೋಬೊ ವಿದ್ಯಾರ್ಥಿಗಳನ್ನು ಅಭಿನಂದಿಸಿ ಶುಭ ಹಾರೈಸಿದರು.
ನಿವೃತ್ತ ಪ್ರಾಂಶುಪಾಲೆ ಹಾಗೂ ಸಾಹಿತಿ ಶ್ಯಾಮಲಾ ಕುಮಾರಿ ಬೇವಿಂಜೆ ಮಾತನಾಡಿ,
ವಿದ್ಯಾರ್ಥಿ ಜೀವನವೇ ಅತ್ಯಂತ ಅಮೂಲ್ಯವಾದದ್ದು. ವಿದ್ಯಾಭ್ಯಾಸದ ಜೊತೆ ಜೊತೆಗೆ ಸ್ವ ಸಾಮರ್ಥ್ಯದ ವ್ಯಕ್ತಿತ್ವದ ಅಭಿವೃದ್ಧಿಗೆ ಆತ್ಮ ವಿಶ್ವಾಸದಿಂದ ಇಂತಹ ವೇದಿಕೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ಈ‌ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ರಾಮದಾಸ ಪ್ರಭು,ಮುಖ್ಯೋಪಾಧ್ಯಾಯರಾದ ಯೋಗೇಂದ್ರ ನಾಯಕ್,ಕನ್ನಡ ಉಪನ್ಯಾಸಕ‌ ದೇವದಾಸ್ ಉಪಸ್ಥಿತರಿದ್ದರು.
ಹಿಂದಿ ಉಪನ್ಯಾಸಕಿ ಸರಸ್ವತಿ, ದೈಹಿಕ ಶಿಕ್ಷಕಿ ಪ್ರಿಯಾ ಪ್ರಭು, ಹಿಂದಿ ಭಾಷಾ ಶಿಕ್ಷಕಿ ಪ್ರಭಾ ಜಿ ಪ್ರತಿಭಾ ಪುರಸ್ಕಾರದ ಪಟ್ಟಿಯನ್ನು ವಾಚಿಸಿದರು.
ಶಿಕ್ಷಕ ಸುನಿಲ್ ಎಸ್ ಶೆಟ್ಟಿ ಸ್ವಾಗತಿಸಿ, ಉಪನ್ಯಾಸಕ ಪ್ರಭಾತ್ ರಂಜನ್ ವಂದಿಸಿದರು.
ಉಪನ್ಯಾಸಕಿ ಸುಧಾ ಭಟ್ ನಿರೂಪಿಸಿದರು

Leave a Reply

Your email address will not be published. Required fields are marked *