ಪುಣೆ: ಉದ್ಯಮಿಯೊಬ್ಬರು ಹೆಂಡತಿಯ ಹುಟ್ಟುಹಬ್ಬದ ಆಚರಣೆಗೆ ದುಬೈಗೆ ಕರೆದುಕೊಂಡು ಹೋಗಲು ನಿರಾಕರಿಸಿದ ಕಾರಣಕ್ಕೆ ಸಿಟ್ಟಿಗೆದ್ದ ಆಕೆ ಗಂಡನ ಮೂಗಿಗೆ ಬಲವಾಗಿ ಗುದ್ದಿದ ಪರಿಣಾಮವಾಗಿ ತೀವೃ ರಕ್ತದ್ರಾವದಿಂದ ಉದ್ಯಮಿ ಪತಿ ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ಶುಕ್ರವಾರ ಪುಣೆಯ ವನವಡಿ ಪ್ರದೇಶದಲ್ಲಿನ ಪಾಶ್ ರೆಸಿಡೆನ್ಶಿಯಲ್ ಸೊಸೈಟಿಯಲ್ಲಿರುವ ತಮ್ಮ ಅಪಾರ್ಟ್ಮೆಂಟ್‌ನಲ್ಲಿ ಗಂಡ ಹೆಂಡತಿಯರ ನಡುವೆ ಜಗಳ ವಿಕೋಪಕ್ಕೆ ತಿರುಗಿ ಪತ್ನಿ ರೇಣುಕಾ ಏಕಾಎಕಿ ಪತಿ ನಿಖಿಲ್ ಖನ್ನಾ ಗೆ ಮುಖಕ್ಕೆ ಪಂಚ್ ನೀಡಿದ್ದಾಳೆ.
ನಿಖಿಲ್ ತನ್ನ ಹುಟ್ಟುಹಬ್ಬವನ್ನು ಆಚರಿಸಲು ದುಬೈಗೆ ರೇಣುಕಾಳನ್ನು ಕರೆದುಕೊಂಡು ಹೋಗಲಿಲ್ಲ ಮತ್ತು ಅವಳ ಹುಟ್ಟುಹಬ್ಬ ಮತ್ತು ವಾರ್ಷಿಕೋತ್ಸವದಂದು ದುಬಾರಿ ಉಡುಗೊರೆಗಳನ್ನು ನೀಡಿಲ್ಲ ಎನ್ನುವ ಕಾರಣಕ್ಕೆ ದಂಪತಿ ಜಗಳವಾಡಿದ್ದಾರೆ. ವಾಗ್ವಾದದ ಸಮಯದಲ್ಲಿ, ರೇಣುಕಾ ನಿಖಿಲ್‌ನ ಮುಖಕ್ಕೆ ತನ್ನ ಮುಷ್ಟಿಯಿಂದ ಬಲವಾಗಿ ಪಂಚ್ ನೀಡಿದ್ದಾಳೆ, ಇದರ ಪರಿಣಾಮವಾಗಿ ಪತಿಯ ಹಲ್ಲುಗಳು ಮುರಿದು ತೀವೃ ರಕ್ತಸ್ರಾವದಿಂದ ನಿಖಿಲ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ