ಹೆಬ್ರಿ: ಮುನಿಯಾಲು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಕಾರ್ತಿಕ ಮಾಸದ ಲಕ್ಷ ದೀಪೋತ್ಸವವು ನವೆಂಬರ್ 30 ನೇ ಗುರುವಾರ ನಡೆಯಲಿದೆ. ಮಧ್ಯಾಹ್ನ 12 ಘಂಟೆಗೆ ಉತ್ಸವ ಮೂರ್ತಿ ಶ್ರೀ ಗೋಪಾಲಕೃಷ್ಣ ದೇವರು ಬೆಳ್ಳಿ ಪಲ್ಲಕಿ ಯಲ್ಲಿ ಧಾತ್ರಿ ಕಟ್ಟೆಗೆ ಬಂದು ಸಮಸ್ತ ಸಮಾಜ ಭಾದವರ ಸೇವೆಯಾಗಿ ಪಂಚಾಮ್ರತ ಆಭಿಷೇಕ, ಸಿಂಯಾಳ ಆಭಿಷೇಕ ನೆರವೇರಲಿದ್ದು ಬಳಿಕ ಭೂರಿ ಸಮಾರಾಧನೆ ನೆರವೇರಲಿದೆ.
ರಾತ್ರಿ ವಿಶೇಷ ರಂಗ ಪೂಜೆಯ ಬಳಿಕ ಬೆಳ್ಳಿ ಮಂಟಪದಲ್ಲಿ, ವಿವಿಧ ವಾದ್ಯ ಘೋಷ್ಠಿಗಳೊಂದಿಗೆ ಬೆಳ್ಳಿ ಮಂಟಪದಲ್ಲಿ ಶ್ರೀ ದೇವರ ಪುರಮೆರವಣಿಗೆ ನಡೆಯಲಿದ್ದು, ಮರುದಿವಸ ಅವಭ್ರತ ಸ್ನಾನ ನಡೆಯಲಿದೆ ಎಂದು ದೇವಸ್ಥಾನದ ಆಡಳಿತಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.