ಬೆಂಗಳೂರು :ಕಳೆದ 8 ತಿಂಗಳಿನಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಕೊನೆಗೂ ಅಧ್ಯಕ್ಷರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಮಾನವ ಹಕ್ಕುಗಳ ಆಯೋಗದ ನೂತನ ಅಧ್ಯಕ್ಷರಾಗಿ ನಿವೃತ್ತ ನ್ಯಾ.ನಾರಾಯಣಸ್ವಾಮಿ ನೇಮಿಸಿ ಆದೇಶ ಹೊರಡಿಸಲಾಗಿದೆ.
ಈ ಹಿಂದೆ ನಾರಾಯಣಸ್ವಾಮಿಯವರು ಹಿಮಾಚಲ ಪ್ರದೇಶದ ಹೈಕೋರ್ಟ್ ನ ಚೀಫ್ ಜಸ್ಟಿಸ್ ಆಗಿ ನಿವೃತ್ತಗೊಂಡಿದ್ದರು.ಅಧ್ಯಕ್ಷರ ಜತೆ ಆಯೋಗಕ್ಕೆ ಇಬ್ಬರು ಸದಸ್ಯರನ್ನು ಸರ್ಕಾರ ನೇಮಿಸಿದೆ. ನಿವೃತ್ತ ಜಡ್ಜ್ ಎಸ್ ಕೆ ಒಂಟಿಗೋಡಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಶ್ಯಾಮ್ ಭಟ್ ಅವರನ್ನು ಸದಸ್ಯರಾಗಿ ನೇಮಕ ಮಾಡಲಾಗಿದೆ.
ಆಯೋಗಕ್ಕೆ ಪದಾಧಿಕಾರಿಗಳ ನೇಮಕವಾಗದೇ ಸುಮಾರು 4800ಕ್ಕೂ ಹೆಚ್ಚು ಕೇಸ್ ಗಳು ತನಿಖೆ ಆಗದೆ ಬಾಕಿ ಉಳಿದಿತ್ತು ಈಗ ಅಧ್ಯಕ್ಷರು ಇಬ್ಬರು ಸದಸ್ಯರ ನೇಮಕ ಹಿನ್ನೆಲೆ ತನಿಖೆ ಪ್ರಗತಿಯಾಗುವ ನಿರೀಕ್ಷೆಯಿದೆ.