ಕಾರ್ಕಳ: ಕಾರು ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಹಾಗೂ ಸಹ ಸವಾರ ಗಾಯಗೊಂಡ ಘಟನೆ ಬೆಳ್ಮಣ್ ಎಂಬಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ಬೆಳ್ಮಣ್ ಗ್ರಾಮದ ಕೃಷಿ ಇಲಾಖೆಯ ಕ್ವಾರ್ಟಸ್ ಕಟ್ಟಡದ ಬಳಿ ಈ ಅಪಘಾತ ಸಂಭವಿಸಿದ್ದು ಪಡುಬಿದ್ರೆ- ಕಾರ್ಕಳ ರಾಜ್ಯಹೆದ್ದಾರಿಯಲ್ಲಿ ಬೈಕ್ ಸವಾರ ಸೂರಜ್ ಹಿಂಬದಿಯಲ್ಲಿ ಸಹಸವಾರ ರಾಜೇಶ್ ಎಂಬವರೊAದಿಗೆ ರಾತ್ರಿ 11 ಗಂಟೆಗೆ ಬೆಳ್ಮಣ್ ಕಡೆಯಿಂದ ನಿರ್ಚಾಲು ಕಡೆಗೆ ಹೋಗುತ್ತಿರುವಾಗ ಪಡುಬಿದ್ರೆ ಕಡೆಯಿಂದ ಕಾರ್ಕಳ ಕಡೆಗೆ ಕಾರು ಚಾಲಕ ಪ್ರತೀಕ್ ಎಂಬಾತನು ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಯಲ್ಲಿ ಚಲಾಯಿಸಿಕೊಂಡು ಸೂರಜ್ ಚಲಾಯಿಸುತ್ತಿದ್ದ ಡಿಕ್ಕಿ ಹೊಡೆದು ನಿಯಂತ್ರಣತಪ್ಪಿ ವಿದ್ಯುತ್ ಕಂಬಕ್ಕೆ ಹೊಡೆದ ಪರಿಣಾಮ ಸವಾರ ಸೂರಜ್ ಮತ್ತು ಸಹ ಸವಾರ ರಾಜೇಶ್ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಈ ಪೈಕಿ ಸೂರಜ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ರಾಜೇಶ್ ತಲೆಗೆ ಗಾಯವಾಗಿದೆ.
ಕಾರು ಚಾಲಕ ಪ್ರತೀಕ್ ಎಂಬಾತನ ಅಜಾಗರೂಕತೆ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದ್ದು, ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
