ಕಾರ್ಕಳ: ಈಗಾಗಲೇ ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದ್ದು, ಬರಗಾಲ ಪಟ್ಟಿಯಲ್ಲಿ ಕಾರ್ಕಳ ತಾಲೂಕು ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ಬರ ನಿರ್ವಹಣೆ ಎದುರಿಸಲು ಅಗತ್ಯಕ್ರಮ ವಹಿಸಲು ಸಿದ್ದರಾಗಿರಬೇಕೆಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶಾಸಕ ಸುನಿಲ್ ಕುಮಾರ್ ಅಧ್ಯಕ್ಷತೆಯಲ್ಲಿ
ಶನಿವಾರ ನಡೆದ ಟಾಸ್ಕ್ ಪೋರ್ಸ್ ಸಭೆಯಲ್ಲಿ ಮಾತನಾಡಿದ ಅವರು, ಬೇಸಗೆಯಲ್ಲಿ ಹಲವು ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆಗಳಿವೆ, ಅಧಿಕಾರಿಗಳು ಸೂಕ್ತ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ. ಪುರಸಭೆ ಹಾಗೂ ತಾಲೂಕಿನ ಎಲ್ಲಾ ಪಂಚಾಯತ್ ವ್ಯಾಾಪ್ತಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಪರ್ಯಾಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕೆಂದರು.
ಹವಾಮಾನ ವೈಪರೀತ್ಯಗಳಿಂದ ಮಳೆಯ ಬಗ್ಗೆ ನಿಖರವಾಗಿ ಅಂದಾಜಿಸಲು ಅಸಾಧ್ಯ. ಮಳೆ ಬಂದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿದು. ಮಳೆ ಕೈಕೊಟ್ಟಲ್ಲಿ ಪರಿಸ್ಥಿತಿ ಬಿಗಡಾಯಿಸಬಹುದು ಅದನ್ನು ಎದುರಿಸಲು ತಾಲೂಕು ಆಡಳಿತ ಸಿದ್ಧವಿರಬೇಕು ಎಂದು ಹೇಳಿದರು. ನೀರಿನ ಸಮಸ್ಯೆ ಇರುವ ಪ್ರದೇಶಗಳನ್ನು ಗುರುತಿಸಿ ಅಗತ್ಯ ನೀರಿನ ವ್ಯವಸ್ಥೆಗೆ ಬಾವಿ, ಬೋರ್ವೆಲ್ ಇತ್ಯಾದಿ ನೀರಿನ ಮೂಲಗಳ ವಸ್ತುಸ್ಥಿತಿ ಅಧ್ಯಯನ ಮಾಡಬೇಕು. ನೀರಿನ ಸಮಸ್ಯೆ ಸಾಮಾನ್ಯ ಸ್ಥಿತಿಯಲ್ಲಿದ್ದರೆ ಎರಡು ಮೂರು ಪಂಚಾಯತ್ಗಳನ್ನು ಒಗ್ಗೂಡಿಸಿ ನೀರು ಪೂರೈಕೆಗೆ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಮಾತ್ರವಲ್ಲದೇ 15 ದಿನಗಳೊಳಗೆ ಸಮಿತಿ ಚರ್ಚಿಸಿ ದರ ನಿಗದಿಗೊಳಿಸಬೇಕು ಎಂದರು. ಪುರಸಭೆ ವ್ಯಾಾಪ್ತಿಯಲ್ಲಿ ಕೂಡ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಮುಖ್ಯಾಾಧಿಕಾರಿಗೆ ಹೇಳಿದರು.
ಬರಪೀಡಿತ ತಾಲೂಕಿನ ಆರ್ಹ ಫಲಾನುಭವಿಗಳಿಗೆ ಸರಕಾರದಿಂದ ನೀಡಲಾಗುವ 2 ಸಾವಿರ ಪರಿಹಾರದ ಕುರಿತು ಶಾಸಕರು ತೋಟಗಾರಿಕೆ ಇಲಾಖೆಯಿಂದ ಮಾಹಿತಿ ಪಡೆದು ಪ್ರೂಟ್ಸ್ ತಂತ್ರಾಂಶದಲ್ಲಿ ಎಫ್ಐಡಿಗೆ ಬಾಕಿ ಉಳಿದವರ ನೋಂದಣಿಗೆ ಶೀಘ್ರ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಎಲ್ಲಾ ಇಲಾಖೆಗಳು ಪರಿಸ್ಥಿತಿ ಎದುರಿಸಲು ಸಿದ್ಧರಿರುವಂತೆ ಸೂಚನೆ ನೀಡಿದರು. ಕಾರ್ಕಳ ತಹಶಿಲ್ದಾಾರ್ ನರಸಪ್ಪ . ಕಾರ್ಕಳ ತಾ.ಪಂ ಇಒ ಗುರುದತ್, ಹೆಬ್ರಿ ಇಒ ಶಶಿಧರ್, ನೊಡೆಲ್ ಅಧಿಕಾರಿ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.