ಬೆಳಗಾವಿ: ಬಿಜೆಪಿ ಕಾರ್ಯಕರ್ತ ಪೃಥ್ವಿಸಿಂಗ್ ಮೇಲೆ ಚಾಕು ಇರಿತ ಆರೋಪ ಪ್ರಕರಣದಲ್ಲಿ ಚನ್ನರಾಜು ಹಟ್ಟಿಹೊಳಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಮೂಲಕ ಬಾಡಿಗಾರ್ಡ್ ಮಾಡಿದ್ದ ಎನ್ನಲಾದ ಚಾಕು ಇರಿತ ಪ್ರಕರಣದಲ್ಲಿ ಚನ್ನರಾಜು ಹಟ್ಟಿಹೊಳಿ ವಿರುದ್ಧ ಕೇಸ್ ದಾಖಲಾಗಿದೆ.
ನಿನ್ನೆ ಬೆಳಗಾವಿಯ ಜಯನಗರದ ನಿವಾಸದ ಬಳಿಯಲ್ಲಿ ಕಾಂಗ್ರೆಸ್ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಆಪ್ತರಿಂದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಆಪ್ತ ಬಿಜೆಪಿಯ ಪೃಥ್ವಿ ಸಿಂಗ್ ಎಂಬುವರಿಗೆ ಚಾಕುವಿನಿಂದ ಇರಿಯಲಾಗಿತ್ತು.ಮನೆಯ ಬಳಿಯಲ್ಲಿ ಚಾಕುವಿನ ಇರಿತಕ್ಕೆ ಒಳಗಾದ ಅವರನ್ನು ಕೂಡಲೇ ಕೆಎಲ್ಇ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇದೀಗ ಆಸ್ಪತ್ರೆಗೆ ಎಂಎಲ್ಸಿ ಛಲವಾದಿ ನಾರಾಯಣ ಸ್ವಾಮಿ ಸೇರಿದಂತೆ ಇತರೆ ಬಿಜೆಪಿ ಮುಖಂಡರು ಆಗಮಿಸಿ, ಆರೋಗ್ಯ ವಿಚಾರಿಸಿದ್ದಾರೆ.
ಪೃಥ್ವಿರಾಜ್ ಅವರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಅಂಗರಕ್ಷಕರಾದ ಸದ್ದಾಂ, ಸುಜಯ್ ಜಾಧವ್ ಎಂಬುವರು ಚಾಕು ಇರಿದು ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.
ಈ ಪ್ರಕರಣದಲ್ಲಿ ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ ಚನ್ನರಾಜು ಹಟ್ಟಿಹೊಳಿ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.