ಕಾರ್ಕಳ: ಶ್ರೀ ಲಕ್ಷ್ಮೀ ಜನಾರ್ದನ ಭಜನಾ ಮಂಡಳಿ ಎಳ್ಳಾರೆಯ ವತಿಯಿಂದ ದೊಂಡೇರಂಗಡಿಯ ಯಕ್ಷ ದೇಗುಲದ “ವಿಶ್ವ ಜ್ಞಾನ ಸಿರಿ” ವಾಚನಾಲಯಕ್ಕೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಯಕ್ಷಗಾನ ಸಂಘದ ಅಧ್ಯಕ್ಷರಾದ ಹರೀಶ್ ದುಗ್ಗನ್ ಬೆಟ್ಟು,ಭಜನಾ ಮಂಡಳಿ ಅಧ್ಯಕ್ಷರಾದ ದಿವ್ಯಾ ದೇವೇಂದ್ರ ಕಾಮತ್,ಪ್ರಶಾಂತ್ ಸಾಲ್ಯಾನ್,ಶಾಂತಿ ಪ್ರಭು,ಸ್ವಾತಿ ಶ್ರೀನಿವಾಸ್ ನಾಯಕ್,ಉದಯ್ ಹೆಗ್ಡೆ,ಅರುಣ್ ಶೆಟ್ಟಿ,ಪ್ರಸನ್ನ ಅಂಡಾರು ಉಪಸ್ಥಿತರಿದ್ದರು.