Share this news

ಧಾರವಾಡ: ಇಸ್ಲಾಂ ಧರ್ಮದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದ ಮೌಲ್ವಿ ತನ್ವೀರ್ ಪೀರಾ ಅವರಿಗೆ ಐಸಿಸ್ ಸಂಪರ್ಕವಿದೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಅಂಜುಮನ್ ಸಂಸ್ಥೆ ಮಾಜಿ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ್ ಸಾಕ್ಷ್ಯ ಬಿಡುಗಡೆ ಮಾಡಿದ್ದಾರೆ.

ಈ ಕುರಿತು ಪೀರಾ ಅವರ ಸೋದರ ಮಾವನೊಂದಿಗೆ ಯತ್ನಾಳ್ ಹೊಂದಿರುವ ವ್ಯವಹಾರದ ದಾಖಲೆಗಳನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು. ವಿಜಯಪುರದ ಎಂ.ಜಿ ರಸ್ತೆಯ ವಾರ್ಡ್ ನಂ.3ರಲ್ಲಿ ಹೋಟೆಲ್ ಟೂರಿಸ್ಟ್ ಕಟ್ಟಿದ್ದಾರೆ. ಇದನ್ನು ಎಂ.ಎಂ ಪೀರಜಾದೆ ಹಾಗೂ ಯತ್ನಾಳ್ ಒಡೆತನದಲ್ಲಿ ಕಟ್ಟಲಾಗಿದೆ. ಪೀರಜಾದೆಯವರು ತನ್ವೀರ್ ಪೀರಾ ಅವರ ತಾಯಿಯ ಸಹೋದರರಾಗಿದ್ದು, ಅವರೊಂದಿಗೆ ಯತ್ನಾಳ್ ಅವರಿಗೆ 30-40 ವರ್ಷಗಳ ವ್ಯವಹಾರಿಕ ಸಂಬಂಧವಿದೆ. ಪೀರಾ ಹಾಗೂ ಪೀರಜಾದೆ ಎಲ್ಲರೂ ಸೇರಿ ವ್ಯವಹಾರ ಮಾಡುತ್ತಾರೆ ಎಂದು ಅವರು ತಿಳಿಸಿದ್ದಾರೆ. ಯತ್ನಾಳ್ ವ್ಯವಹಾರ ಕುರಿತು ಸಿಎಂ ಸಿದ್ದರಾಮಯ್ಯ ಸಹ ಈ ಹಿಂದೆ ಟ್ವೀಟ್ ಮಾಡಿದ್ದರು. ಆದರೆ, ಅದನ್ನು ಯತ್ನಾಳ್ ನಿರಾಕರಿಸಿದ್ದರು. ಇದಕ್ಕೆ ಪ್ರತಿಯಾಗಿ ತಮಟಗಾರ್ ಇಂದು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ಈ ಮೂಲಕ ಯತ್ನಾಳ್ ಅವರ ಆರೋಪಕ್ಕೆ ಮತ್ತೆ ತಿರುವು ಸಿಕ್ಕಂತಾಗಿದ್ದು ಇದು ರಾಜಕೀಯ ವಲಯದಲ್ಲಿ ಮತ್ತೊಂದು ಸುತ್ತಿನ ಹೋರಾಟಕ್ಕೆ ಅಸ್ತ್ರ ಸಿಕ್ಕಂತಾಗಿದೆ

Leave a Reply

Your email address will not be published. Required fields are marked *