ಉಡುಪಿ: ಉಡುಪಿ ಜಿಲ್ಲೆಯಲ್ಲಿ ಚಿರಪರಿಚಿತರಾಗಿದ್ದ ಸಮಾಜ ಸೇವಕ ಕಾಪು ಲೀಲಾಧರ ಶೆಟ್ಟಿ ಹಾಗೂ ಅವರ ಪತ್ನಿ ವಸುಂಧರ ಶೆಟ್ಟಿ ದಂಪತಿ ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ನಡೆದಿದೆ. ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ಅವರು ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.ಅಶಕ್ತರ ಬಗ್ಗೆ ಕಾಳಜಿ ವಹಿಸುತಿದ್ದ ಲೀಲಾಧರ ಶೆಟ್ಟಿ ಸಮಾಜಪರ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಎಲ್ಲರ ಮೆಚ್ಚುಗೆಗೆ, ಪ್ರೀತಿಗೆ ಪಾತ್ರರಾಗಿದ್ದರು. ಪ್ರಸಿದ್ಧ ಕಲಾವಿದರನ್ನೊಳಗೊಂಡ ರಂಗತರಂಗ ನಾಟಕ ತಂಡವನ್ನು, ರಚಿಸಿ ಮುನ್ನಡೆಸಿಕೊಂಡು ಹೋಗುತ್ತಿದ್ದ ಇವರು ಕಾಪು ವಿಧಾನ ಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಬಂಟರ ಸಂಘದ ಅಧ್ಯಕ್ಷ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.
ಲೀಲಾಧರ ಶೆಟ್ಟಿಯವರು ಜಿಲ್ಲಾ ಕಬಡ್ಡಿ ಸಂಸ್ಥೆಯ ಉಪಾಧ್ಯಕ್ಷರು ಹಾಗೂ ಅತ್ಯಂತ ಸಮಾಜಮುಖಿ ಕಾರ್ಯ ನಿರ್ವಹಿಸಿದ ಸಮಾಜಸೇವಕರೂ ಆಗಿದ್ದರು. ವಿಶೇಷವಾಗಿ ರಂಗಕರ್ಮಿಯು ಆಗಿ ಕಳೆದ ಹಲವಾರು ವರ್ಷಗಳಿಂದ “ರಂಗಿತರಂಗ” ನಾಟಕ ತಂಡವನ್ನು ಮುನ್ನಡೆಸಿ ನಾಟಕ ನಿರ್ದೇಶನ, ನಟರಾಗಿ ಕೂಡಾ ಜನಾನುರಾಯಿಯಾಗಿದ್ದರು.
ಮುಂದಿನ ವಾರ ನಡೆಯಬೇಕಾಗಿದ್ದ ಕಬ್ಬಡಿ ಪಂದ್ಯಾಟಕ್ಕೆ ಬೇಕಾದ ಊಟ ಉಪಹಾರ ಶಾಮಿಯಾನ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಲೀಲಾಧರ ಶೆಟ್ಟಿ ಅವರೇ ತಯಾರಿ ಮಾಡಿಟ್ಟಿದ್ದರು. ಇವರ ಅಂತಿಮ ದರ್ಶನ ಇಂದು ಸಂಜೆ ನಾಲ್ಕು ಗಂಟೆಗೆ ಕಾಪು ಮಜೂರು ಕರಂದಾಡಿ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.
ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ ಪೊಲೀಸ್ ತನಿಖೆಯ ನಂತರವಷ್ಟೆ ಮಾಹಿತಿ ತಿಳಿದು ಬರ ಬೇಕಾಗಿದೆ.
ಕಾಪು ಪೊಲೀಸರು ಘಟನಾಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ