ಹೆಬ್ರಿ ಡಿ.20: ಹೆಬ್ರಿ ತಾಲೂಕಿನ ಆರ್ಡಿಯ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯ ಶಾಲಾ ಮಕ್ಕಳ ಕ್ರಿಡೋತ್ಸವಕ್ಕೆ ಬಹುಮಾನದ ವೆಚ್ಚ ಹಾಗೂ ಶಾಲೆಗೆ 150 ಪ್ಲಾಸ್ಟಿಕ್ ಕುರ್ಚಿಗಳ ಸಹಿತ ರೂ.1.40 ಲಕ್ಷ ಮೌಲ್ಯದ ಸಾಮಗ್ರಿಗಳನ್ನು ವರಂಗ ಕೆಲ್ ಟೆಕ್ ಸಂಸ್ಥೆಯ ವತಿಯಿಂದ ಕೊಡುಗೆಯಾಗಿ ನೀಡಲಾಯಿತು.ಕೆಲ್ ಟೆಕ್ ಸಂಸ್ಥೆಯ ಘಟಕದ ಮುಖ್ಯಸ್ಥ ಎಂ. ಆರ್. ರಾವ್, ಪ್ರಬಂಧಕ ಶ್ರೀಶ ರಾವ್ ಮತ್ತು ಶ್ರೇಯಸ್ ಜೈನ್ ವಿತರಿಸಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕ ಶೇಖರ್ ಶೆಟ್ಟಿಗಾರ್, ಎಸ್. ಡಿ. ಎಮ್. ಸಿ ಸದಸ್ಯರು ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.