Share this news

ಕಾರ್ಕಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮರಾಟಿ ಯುವ ಸಾಂಸ್ಕೃತಿಕ ಕಲಾ ಮತ್ತು ಕ್ರೀಡಾ ಸಂಘ ಪೆರ್ಡೂರು ಇದರ ವತಿಯಿಂದ ಗಿರಿಜನ ಉತ್ಸವ 2023 ಕಾರ್ಯಕ್ರಮವು ಪೆರ್ಡೂರಿನ ಸುಬ್ರಾಯ ಕಲ್ಯಾಣ ಮಂದಿರದಲ್ಲಿ ಡಿ 24 ರಂದು ಭಾನುವಾರ ನಡೆಯಲಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪೆರ್ಡೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಚೇತನಾ ಶೆಟ್ಟಿ, ಉಡುಪಿ ಜಿಲ್ಲಾ ಮರಾಟಿ ಸಂಘದ ಅಧ್ಯಕ್ಷ ಉಮೇಶ್ ನಾಯ್ಕ್ ಚೇರ್ಕಾಡಿ, ಪೆರ್ಡೂರು ಮರಾಟಿ ಜಿಲ್ಲಾ ಕೊರಗ ಸಂಘದ ಅಧ್ಯಕ್ಷೆ ಗೌರಿ, ರಾಜ್ಯ ಮಲೆಕುಡಿಯ ಸಂಘದ ಅದ್ಯಕ್ಷ ಶ್ರೀಧರ್ ಗೌಡ, ಪೆರ್ಡೂರು ಯುವ ಮರಾಟಿ ಸಾಂಸ್ಕೃತಿಕ ಮತ್ತು ಕಲಾ ಸಂಘದ ಅಧ್ಯಕ್ಷ ರವಿ ನಾಯ್ಕ್ ಹರಿಖಂಡಿಗೆ ಉಪಸ್ಥಿತರಿರಲಿದ್ದಾರೆ.
ಬುಡಕಟ್ಟು ಜನಾಂಗದ ವಿವಿಧ ಕಲಾ‌ಪ್ರಕಾರಗಳ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುವ ಕಾರ್ಯಕ್ರಮ ಇದಾಗಿದ್ದು,ಸುಗಮ ಸಂಗೀತ, ಪಟ ಕುಣಿತ, ಡೋಲು ಹಾಗೂ ಕೊಳಲು ವಾದನ, ಚಿಲಿಪಿಲಿ ಗೊಂಬೆ,ಹೋಳಿ ಕುಣಿತ, ಯಕ್ಷಗಾನ ವೈಭವ,ಕುಣಿತ ಭಜನೆ, ಕರಗ ಕೋಲಾಟ,ಬೇಡರ ಕುಣಿತ, ಚಂಡೆ ವಾದನ ಸೇರಿದಂತೆ ಕಲಾ ಪ್ರಕಾರಗಳ ಪ್ರದರ್ಶನ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲೆಯ ಎಲ್ಲಾ ಬುಡಕಟ್ಟು ಜನಾಂಗದವರು ಭಾಗವಹಿಸುವಂತೆ ಕೋರಲಾಗಿದೆ

ನೀವು ಈಗಾಗಲೇ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ? ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ  ಲಿಂಕ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *