Share this news

ಕಾರ್ಕಳ: ಕಲ್ಲು ಕೋರೆಯಲ್ಲಿ ದುಡಿಯುತ್ತಿದ್ದ ಕಾರ್ಮಿಕರು ತಮ್ಮ ದುಡಿಮೆಯ ಸಂಬಳ ಕೇಳಿದ್ದಕ್ಕೆ ಕೋರೆ ಮಾಲೀಕ ಇಬ್ಬರು ಕಾರ್ಮಿಕರ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಪ್ರಕರಣ ನಡೆದಿದೆ.
ನಂದಳಿಕೆ ಗ್ರಾಮದ ಮಹೇಶ್ ಹಾಗೂ ಬಸವರಾಜ್ ಎಂಬವರು ಕಾರ್ಕಳದ ಗುಂಡ್ಯಡ್ಕ ಎಂಬಲ್ಲಿನ ಪ್ರಕಾಶ್ ಎಂಬವರ ಕಲ್ಲು ಕೋರೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಡಿ 18ರಂದು ಕಾರ್ಮಿಕ ಬಸವರಾಜು ಎಂಬವರಿಗೆ ಸೂಡ ದೇವಸ್ಥಾನದ ಜಾತ್ರೆಗೆ ಹೋಗುವ ಸಲುವಾಗಿ ಹಣ ಬೇಕಿದ್ದ ಹಿನ್ನಲೆಯಲ್ಲಿ ಬಸವರಾಜ್ ತನ್ನ ಸ್ನೇಹಿತ ಮಹೇಶ್ ಎಂಬವರ ಬಳಿ ದುಡಿದ ಹಣವನ್ನು ಪ್ರಕಾಶ್ ರವರಿಂದ ತೆಗೆಸಿಕೊಡಿ ಎಂದು ಹೇಳಿದ್ದರು. ಬಳಿಕ ಮಹೇಶ ಅವರು ಮಾಲಕರಾದ ಪ್ರಕಾಶ್ ಎಂಬವರಿಗೆ ಪೋನ್ ಮಾಡಿ ಬಸವರಾಜ್ ನ ಹಣ ಕೊಡುವಂತೆ ಕೇಳಿದಾಗ ಆತನನ್ನು ಮನೆಗೆ ಕರೆದುಕೊಂಡು ಬಾ ಅಲ್ಲಿ ಲೆಕ್ಕಾಚಾರ ಮಾಡುವುದಾಗಿ ಪ್ರಕಾಶ್ ಹೇಳಿದ್ದ ಹಿನ್ನಲೆಯಲ್ಲಿ ಮಹೇಶ್ ಬಸವರಾಜ್ ಜತೆ ಪ್ರಕಾಶ್ ರವರ ಮನೆಗೆ ಹೋದಾಗ ಬಸವರಾಜ್ ನು ಆತನ ಸಂಬಳವನ್ನು ಪಡೆದುಕೊಂಡು ಅಲ್ಲಿಂದ ವಾಪಾಸು ದೂಪದಕಟ್ಟೆಗೆ ಬಂದಿದ್ದ, ಆ ಸಮಯದಲ್ಲಿ ಬಸವರಾಜ್ ಮತ್ತೆ ಸಂಬಳದ ವಿಚಾರವಾಗಿ ತಗಾದೆ ಎತ್ತಿದ್ದು ತನ್ನ ದುಡಿಮೆಯ ಎಲ್ಲಾ ಹಣವನ್ನು ಪ್ರಕಾಶನಿಂದ ತೆಗೆಸಿಕೊಡು ಎಂದು ಮಹೇಶನಿಗೆ ಹೇಳಿದ್ದ. ಬಳಿಕ ಇವರಿಬ್ಬರು ಸ್ಕೂಟರಿನಲ್ಲಿ ಮತ್ತೆ ದೂಪದಕಟ್ಟೆಯಲ್ಲಿನ ಪ್ರಕಾಶ್ ಮನೆಗೆ ಹೋಗಿದ್ದರು. ಈವೇಳೆ ಆರೋಪಿ ಪ್ರಕಾಶ್ ನಿನಗೆ ಈಗಾಗಲೇ 1500 ರೂಪಾಯಿ ಕೊಟ್ಟಿದ್ದೇನೆ ಪುನಃ ಕೇಳಲು ಬಂದಿದ್ದಿಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಬಸವರಾಜ್ ನ ಬೆನ್ನು, ಕುತ್ತಿಗೆಗೆ ಹಲ್ಲೆ ನಡೆಸಿದ್ದು ಮಾತ್ರವಲ್ಲದೇ ಇನ್ನೊಬ್ಬ ಕಾರ್ಮಿಕ ಮಹೇಶ ಎಂಬಾತನಿಗೂ ಹಲ್ಲೆ ನಡೆಸಿದ್ದ ಎಂದು ಆರೋಪಿಸಲಾಗಿದೆ. ಇದಲ್ಲದೇ ಇವರ ಸ್ಕೂಟರನ್ನು ತೆಗೆದು ಒಳಗಿಟ್ಟಯ ಕೊಡದೇ ಬೆದರಿಕೆ ಹಾಕಿದ್ದಾನೆ ಎಂದು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ನೀವು ಈಗಾಗಲೇ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ? ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ  ಲಿಂಕ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *