Share this news

ಕಾರ್ಕಳ: ಬಂಡೀಮಠ ಸಮೀಪದ ಜೋಗಿನಕೆರೆ ಅಯ್ಯಪ್ಪ ಮಂದಿರ ಕೆರೆಗೆ ಸಮೀಪದ ಗೋಶಾಲೆಯ ಗಂಜಲ ಸೋರಿಕೆಯಿಂದ ಇಡೀ ಕೆರೆ ಕಲುಷಿತವಾಗಿದ್ದು, ಇದರಿಂದ ಅಯ್ಯಪ್ಪ ಮಾಲಾಧಾರಿಗಳಿಗೆ ತೀವೃ ತೊಂದರೆಯಾಗುತ್ತಿದ್ದು, ಈ ಕುರಿತು ಕ್ರಮಕ್ಕೆ ಆಗ್ರಹಿಸಿ ಅಯ್ಯಪ್ಪ ವ್ರತಧಾರಿಗಳು ಕಾರ್ಕಳ ಪುರಸಭೆಗೆ ಮನವಿ ಮಾಡಿದ್ದಾರೆ.
ಬಂಡೀಮಠ ಬಸ್ಸು ನಿಲ್ದಾಣಕ್ಕೆ ಹೊಂದಿಕೊAಡು ಗೋಪಿನಾಥ ಭಟ್ ಎಂಬವರು ಕಳೆದ ಹಲವು ವರ್ಷಗಳಿಂದ ಗೋಶಾಲೆಯನ್ನು ನಡೆಸುತ್ತಿದ್ದು, ಈ ಗೋಶಾಲೆಗೆ ಹೊಂದಿಕೊAಡೇ ಜೋಗಿನಕೆರೆ ಅಯ್ಯಪ್ಪ ಮಂದಿರವಿದೆ, ಇಲ್ಲಿನ ಅಯ್ಯಪ್ಪ ವೃತಧಾರಿಗಳು ಸ್ನಾನ ಹಾಗೂ ಪೂಜೆಗೆ ಪುರಾತನ ಜೋಗಿನಕೆರೆಯ ನೀರನ್ನೇ ಉಪಯೋಗಿಸುತ್ತಿದ್ದು,ಇತ್ತೀಚಿನ ಕೆಲವು ವರ್ಷದಿಂದ ಗೋಶಾಲೆಯಲ್ಲಿನ ದನಕರುಗಳ ಗಂಜಲವು ಕೆರೆಯ ಸಮೀಪದ ಚರಂಡಿಯಲ್ಲಿ ಹರಿಯುತ್ತಿದ್ದು ಮಾತ್ರವಲ್ಲದೇ ಇದು ಸಮೀಪದ ಕೆರೆಗೆ ಇಂಗುತ್ತಿದ್ದು ಇದರಿಂದ ಕೆರೆಯ ನೀರು ಕಲುಷಿತವಾಗಿದೆ ಎಂದು ಭಕ್ತರು ಆರೋಪಿಸಿದ್ದಾರೆ.ಈ ಕುರಿತು ಪುರಸಭಾ ಅಧಿಕಾರಿಗಳು ಪರಿಶೀಲನೆಗೆ ಮುಂದಾಗಿದ್ದಾರೆ. ಆದರೆ ಮಾಹಿತಿಯ ಪ್ರಕಾರ ಗೋಶಾಲೆಗೆ ಯಾವುದೇ ಅನುಮತಿ ನೀಡಿಲ್ಲ ಮಾನವೀಯ ನೆಲೆಯಲ್ಲಿ ಗೋಶಾಲೆಗೆ ವಿನಾಯಿತಿ ನೀಡಲಾಗಿದೆ ಎನ್ನಲಾಗಿದ್ದು, ಗೋಶಾಲೆ ನಿರ್ವಾಹಕರು ಈ ಸಮಸ್ಯೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಿದೆ ಎಂದು ಭಕ್ತರು ಆಗ್ರಹಿಸಿದ್ದಾರೆ.

ನೀವು ಈಗಾಗಲೇ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ? ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ  ಲಿಂಕ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *