ಕಾರ್ಕಳ: ಕ್ಷತ್ರಿಯ ಮರಾಠ ಸಮಾಜ ಕಾರ್ಕಳ ಇದರ ವಾರ್ಷಿಕ ಕ್ರೀಡಾಕೂಟವು ಡಿ31 ರಂದು ಕಾರ್ಕಳ ಸ್ವರಾಜ್ಯ ಮೈದಾನದಲ್ಲಿ ನಡೆಯಿತು.
ಮರಾಠ ಕ್ಷತ್ರಿಯ ಸಮಾಜದ ಹಿರಿಯರಾದ ಮುಂಡ್ಕೂರು ಜನ್ನೊಜಿ ರಾವ್ ಬೇಡೆಕರ್ ಕ್ರೀಡಾಕೂಟವನ್ನು ಉದ್ಘಾಟಿಸಿದರು.
ಮರಾಠ ಸಮಾಜದ ಅಧ್ಯಕ್ಷ ಶುಭದರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಹಿರಿಯಂಗಡಿ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೆಸರ್ ಗಿರೀಶ್ ರಾವ್ ಕೆ.ಕೆ.ಎಂ.ಪಿ. ಜಿಲ್ಲಾದ್ಯಕ್ಷ ಪ್ರಕಾಶ್ ರಾವ್, ಕೆ.ಕೆ.ಎಂ.ಪಿ ತಾಲೂಕು ಘಟಕದ ಅದ್ಯಕ್ಷ ಕೀರ್ತನ್ ಲಾಡ್, ಸುಧಾಕರ್ ಬಹುಮಾನ್, ರಮಾನಾಥ್ ರಾವ್ ತಾಮಸ, ಹರೀಶ್ ಸಪ್ಟೇಕರ್, ರಾಜೇಶ್ ಪವಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಪೂರ್ವ ಪ್ರಾಥಮಿಕ ವಿಭಾಗದಿಂದ 50 ವರ್ಷ ಮೇಲ್ಪಟ್ಟವರ ವಿಭಾಗದವರೆಗೆ ಪುರುಷ ಮತ್ತು ಮಹಿಳೆಯರಿಗೆ ಪ್ರತೇಕ ವಿವಿಧ80 ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಪ್ರತೀ ವಿಭಾಗದ ಸ್ಪರ್ಧಾ ವಿಜೇತರಿಗೆ ನಗದು, ಪದಕ ಮತ್ತು ಪ್ರಶಸ್ತಿ ಪತ್ರ ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಶಂಸನಾ ಪತ್ರ ಮತ್ತು ಉಡುಗೊರೆಯನ್ನು ನೀಡಿ ಗೌರವಿಸಲಾಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸಮಾಜದ ಕ್ರೀಡಾ ಸಾಧಕರಾದ ಧೀರಜ್, ಅನಿರುಧ್ದ್, ಪೂಜಾ, ಸಮೃಧ್ದಿ, ಸಾಂಚಿ, ಪ್ರದ್ಯೋತ್, ಅಮೋಘ್ ಮೊದಲಾದವರನ್ನು ಸನ್ಮಾನಿಸಲಾಯಿತು.
ವಿವಿಧ ವಿಭಾಗದಲ್ಲಿ ಚಾಂಪಿಯನ್ ಪ್ರಶಸ್ತಿಯನ್ನು ಪಡೆದ ಆಯುಷಿ, ಧ್ಯಾನ್, ದಿಶಾ, ವಿಜೇತ್, ಅದ್ವಿತಾ, ಭುವನ್, ಸುಹಾಸ್, ಸಮೃಧ್ದಿ, ಸಂವಿತ್ ಅನನ್ಯ, ಶರತ್, ಪೂಜಾ, ವಿನೀತ್, ನಿಶಾ ಧೀರಜ್, ರೇಣುಕಾ, ಶೀನೋಜಿ ರಾವ್, ರಾಜಾರಾಮ್, ಪ್ರಕಾಶ್ ರಾವ್ ಇವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಮಾಜದ ಅದ್ಯಕ್ಷರಾದ ಶುಭದರಾವ್, ಗಿರೀಶ್ ರಾವ್, ಸಿ.ಎ. ಹರೀಶ್ ಮೋರೆ, ಗುಣಪ್ರಕಾಶ್, ಶಿವಾಜಿ ಜಾದವ್, ದಯಾನಂದ ಶಿಂಧೆ, ಗುಣವತಿ ಪವಾರ್, ಡಾ. ಸುಮತಿ ಪವಾರ್, ಪುಪ್ಪ ಪ್ರಕಾಶ್, ದೈಹಿಕ ಶಿಕ್ಷಕ ನವೀನ್ಚಂದ್ರ ಮೊದಲಾದವರು ಉಪಸ್ಥಿತರಿದ್ದರು. ಹರೇಂದ್ರರಾವ್ ಮತ್ತು ಆಶಾಲತ ನಿರೂಪಿಸಿದರು ಪ್ರಸನ್ನ ರಾವ್ ವಿಜೇತರ ವಿವರವನ್ನು ವಾಚಿಸಿದರು ಗಿರೀಶ್ ಕವಡೆ ವಂದಿಸಿದರು. ದೇವಳದ ಆಡಳಿತ ಮಂಡಳಿ ಮತ್ತು ಸೇವಾಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು
ನೀವು ಈಗಾಗಲೇ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ? ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ




ನೀವು ಈಗಾಗಲೇ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ? ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ




