Share this news

ಉಡುಪಿ: ಜಿಲ್ಲೆಯ ಎಲ್ಲೂರು ಗ್ರಾಮದಲ್ಲಿರುವ ಅದಾನಿ ಒಡೆತನದ ಉಡುಪಿ ಪವರ್ ಕಾರ್ಪೋರೇಷನ್ ಲಿಮಿಟೆಡ್ ಕಂಪನಿಯು ತನ್ನ ಎರಡು ಸ್ಥಾವರಗಳಲ್ಲಿ ಒಟ್ಟು 1,200 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯದೊಂದಿಗೆ ತಾನು ಉತ್ಪಾದಿಸುವ ಸಂಪೂರ್ಣ ವಿದ್ಯುತ್ ನ್ನು ರಾಜ್ಯದ ಎಸ್ಕಾಂಗಳಿಗೆ ಪೂರೈಸುತ್ತಿದೆ‌

ಒಪ್ಪಂದದ ಪ್ರಕಾರ ಅದಾನಿ ಸಂಸ್ಥೆಯು 1,015 ಮೆಗಾವ್ಯಾಟ್ ವಿದ್ಯುತ್ ನ್ನು ಕರ್ನಾಟಕಕ್ಕೆ ಮತ್ತು ಉಳಿದ 185 ಮೆಗಾವ್ಯಾಟ್ ನ್ನು ಪಂಜಾಬ್‌ಗೆ ಪೂರೈಸಬೇಕಿತ್ತು. ಆದರೆ ತೀವ್ರ ಮಳೆಕೊರತೆಯಿಂದಾಗಿ ರಾಜ್ಯದಲ್ಲಿನ ಪ್ರಮುಖ ಜಲವಿದ್ಯುತ್ ಸ್ಥಾವರಗಳಲ್ಲಿ ಬೇಡಿಕೆಯ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯಾಗದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿದ್ಯುತ್ ಕ್ಷಾಮವನ್ನು ನೀಗಿಸುವ ನಿಟ್ಟಿನಲ್ಲಿ ಕಳೆದ ಎರಡು ತಿಂಗಳ ಹಿಂದೆ ಸರ್ಕಾರ ವಿದ್ಯುತ್ ಕಾಯಿದೆಯ ಸೆಕ್ಷನ್ 11 ರ ಅಡಿಯಲ್ಲಿ ತುರ್ತು ಷರತ್ತು ವಿಧಿಸಿ , ರಾಜ್ಯದ ಎಲ್ಲಾ ಖಾಸಗಿ ವಿದ್ಯುತ್ ಉತ್ಪಾದನಾ ಕಂಪನಿಗಳು ತಾವು ಉತ್ಪಾದಿಸುವ ಸಂಪೂರ್ಣ ವಿದ್ಯುತ್ ನ್ನು ರಾಜ್ಯಕ್ಕೆ ಮಾತ್ರ ಮಾರಾಟ ಮಾಡಬೇಕೆಂದು ಆದೇಶಿಸಿತು. ಈ ಹಿನ್ನೆಲೆಯಲ್ಲಿ ಯುಪಿಸಿಎಲ್ ಪೂರ್ಣ ಪ್ರಮಾಣದ ವಿದ್ಯುತ್ತನ್ನು ಕರ್ನಾಟಕದ ಎಸ್ಕಾಂಗಳಿಗೆ ಪೂರೈಸುತ್ತಿದೆ.
ಅದಾನಿ ಸಂಸ್ಥೆಯು ಕರ್ನಾಟಕಕ್ಕೆ ಪ್ರತಿ ಯೂನಿಟ್‌ಗೆ 5 ರೂಪಾಯಿಗೆ ವಿದ್ಯುತ್ ಮಾರಾಟ ಮಾಡುತ್ತಿದ್ದರೆ, ವಿದ್ಯುತ್ ಖರೀದಿ ಒಪ್ಪಂದದ ಪ್ರಕಾರ ಪಂಜಾಬ್‌ಗೆ 8 ರೂಪಾಯಿಗೆ ಮಾರಾಟ ಮಾಡುತ್ತಿದೆ. ಕಳೆದ ವರ್ಷ, ರಾಜ್ಯವು ಹೇರಳವಾಗಿ ಮಳೆಯಾಗುವುದರೊಂದಿಗೆ, ಅದರ ಹೈಡಲ್ ಘಟಕಗಳಿಂದ ಸಾಕಷ್ಟು ಉತ್ಪಾದನೆಯನ್ನು ಹೊಂದಿದ್ದರಿಂದ ಸರ್ಕಾರವು ಅದಾನಿ ಪವರ್ ಲಿಮಿಟೆಡ್ ನಿಂದ ಯಾವುದೇ ವಿದ್ಯುತ್ ಖರೀದಿಸಲಿಲ್ಲ. ಬೇಡಿಕೆಯು ಹೆಚ್ಚಿಲ್ಲದ ಕಾರಣ ರಾಜ್ಯವು ಸರಬರಾಜುಗಳನ್ನು ನಿರ್ವಹಿಸಬಹುದು ಎಂದು ಅದಾನಿ ಪವರ್ ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ತಿಳಿಸಿದ್ದಾರೆ. ಸ್ಥಾವರವು ವಿದ್ಯುತ್ ಉತ್ಪಾದಿಸಲು ಸಾಕಷ್ಟು ಆಮದು ಮಾಡಿದ ಕಲ್ಲಿದ್ದಲನ್ನು ಹೊಂದಿದೆ “ಎಸ್ಕಾಮ್‌ಗಳು ಎಪಿಎಲ್‌ಗೆ ಬರಬೇಕಾದ ಎಲ್ಲಾ ಹಣವನ್ನು ಪಾವತಿಸಿವೆ. ಕರ್ನಾಟಕಕ್ಕೆ ಪ್ರತ್ಯೇಕವಾಗಿ ವಿದ್ಯುತ್ ಪೂರೈಸಲು ಯಾವುದೇ ಸಮಸ್ಯೆ ಇಲ್ಲ ಎಂದು ಅವರು ಹೇಳಿದರು.

ನೀವು ಈಗಾಗಲೇ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ? ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ  ಲಿಂಕ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *