ಉಡುಪಿ: ಸನಾತನ ಹಿಂದೂ ಧರ್ಮಕ್ಕೆ ಲಕ್ಷಾಂತರ ವರ್ಷಗಳ ಇತಿಹಾಸವಿದ್ದು, ಭಾರತದಲ್ಲಿ ಹಿಂದೂ ಧರ್ಮವು ಎಲ್ಲಾ ಧರ್ಮಗಳು, ಮತ,ಪಂಥಗಳನ್ನು ಅಪ್ಪಿಕೊಂಡೇ ಗಟ್ಟಿಯಾಗಿ ನೆಲೆಯೂರಿದ್ದು, ಭಾರತದ ಮೇಲೆ ಮೊಘಲರ ದಾಳಿಗೂ ಮುನ್ನ ಭಾರತ ಹಿಂದೂ ರಾಷ್ಟ್ರವೇ ಆಗಿತ್ತು ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಭಾರತ ಹಿಂದೂರಾಷ್ಟçವಾದರೆ ಅಪಘಾನಿಸ್ತಾನ, ಪಾಕಿಸ್ತಾನದಂತೆ ಅರಾಜಕತೆ,ಹಿಂಸೆ, ಅಶಾಂತಿ ಸೃಷ್ಟಿಯಾಗುತ್ತದೆ,ಆದ್ದರಿಂದ ಈ ದೇಶ ಹಿಂದೂ ರಾಷ್ಟ್ರ ವಾಗಬಾರದು ಎಂದು ಡಾ.ಯತೀಂದ್ರ ಸಿದ್ದರಾಮಯ್ಯನವರ ವಿವಾದಿತ ಹೇಳಿಕೆಯ ಕುರಿತಂತೆ ಪ್ರತಿಕ್ರಿಯಿಸಿದ ಶ್ರೀಗಳು, ಭಾರತದ ಮೊದಲೇ ಹಿಂದೂ ರಾಷ್ಟçವೇ ಆಗಿತ್ತು, ಹಿಂದೂಗಳ ಎಲ್ಲರೊಂದಿಗೂ ಸಹಜೀವನ ನಡೆಸಿಕೊಂಡು ಶಾಂತಿಯುತ ಜೀವನ ನಡೆಸುವವರು, ಹಿಂದೂ ವಿರೋಧಿಗಳಿಗೆ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಬೇಕಿಲ್ಲ, ಹಾಗಾದರೆ ಅಶಾಂತಿ, ಅರಾಜಕತೆ ಸೃಷ್ಟಿಸುವವರು ಯಾರು ಎಂದು ಮರುಪ್ರಶ್ನಿಸಿದರು.
ನೀವು ಈಗಾಗಲೇ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ? ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ