Share this news

ಚಿಕ್ಕಮಗಳೂರು :ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಗೈರು ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಬಿಜೆಪಿ ಮಾಜಿ ಸಚಿವ ಸಿ ಟಿ ರವಿ ಪ್ರತಿಕ್ರಿಯೆ ನೀಡಿದ್ದು, ಮುಸ್ಲಿಮರನ್ನು ಓಲೈಸಲು ಹಿಂದೂ ಸಮಾಜವನ್ನು ಜಾತಿವಾರು ಆಧಾರದಲ್ಲಿ ಒಡೆಯುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಣಿತರಾಗಿದ್ದಾರೆ ಎಂದು ಸಿ ಟಿ ರವಿ ಕಿಡಿ ಕಾರಿದ್ದಾರೆ.
ಚಿಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ‌ ಹಿಂದೆ ವೀರಶೈವ ಲಿಂಗಾಯತ ಸಮಾಜವನ್ನು ವಿಭಜಿಸಲು ಹೋಗಿ ತೀವ್ರ ಮುಖಭಂಗ ಅನುಭವಿಸಿದ ಸಿದ್ದರಾಮಯ್ಯ ತನ್ನ ಹಳೆ ಚಾಳಿ ಮುಂದುವರಿಸಿದ್ದು ಸಮಾಜ ಒಡೆಯುವುದರಲ್ಲಿ ಸಿದ್ದರಾಮಯ್ಯ ಪ್ರೊಡ್ಯೂಸರ್ ಆಗಿದ್ದಾರೆ ಎಂದರು.
ಅಲ್ಪಸಂಖ್ಯಾತರ ಓಲೈಕೆಗಾಗಿ ಅಯೋಧ್ಯೆಯ ಶ್ರೀರಾಮ ಪ್ರತಿಷ್ಠಾಪನ ಕಾರ್ಯಕ್ರಮಕ್ಕೆ ಬರುತ್ತಿಲ್ಲ. ಅವರು ಕಾರ್ಯಕ್ರಮ ಬಹಿಷ್ಕರಿಸಿದ ಉದ್ದೇಶವೇ ಮುಸ್ಲಿಮತಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಎಂದು ಕುಟುಕಿದ ಅವರು ಹಿಂದೂಗಳನ್ನು ಜಾತಿವಾರು ಒಡೆಯುವ ನೀತಿ ಅವರದ್ದಾಗಿದೆ ಎಂದು ಆರೋಪಿಸಿದ್ದಾರೆ.

ಅಲ್ಪಸಂಖ್ಯಾತರ ಓಲೈಕೆಗಾಗಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಯನ್ನು ಕಾಂಗ್ರೆಸ್ ಬಹಿಷ್ಕರಿಸಿದೆ. ಈ ಮೊದಲು 1947ರಲ್ಲಿ ದೇಶವನ್ನು ಒಡೆದವರು ಈಗ ಜಾತಿವಾರು ಮೂಲಕ ಸಮಾಜವನ್ನು ಒಡೆಯಲು ಹೊರಟಿದ್ದಾರೆ.
ಶ್ರೀ ರಾಮ ಎಲ್ಲರನ್ನೂ ಜೋಡಿಸಿದವನು. ರಾಮನ ಕಾರ್ಯಕ್ಕೆ ಪ್ರಾಣಿ ಪಕ್ಷಿಗಳು ಸೇರಿದಂತೆ ಎಲ್ಲಾ ಸಮುದಾಯದವರು ಕೈಜೋಡಿಸಿದ್ದಾರೆ. ಗುಹಾ, ಶಬರಿ, ಹನುಮಂತ ಜಟಾಯು ವಿಭೀಷಣ ಹೀಗೆ ಎಲ್ಲರೂ ರಾಮನ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ರಾಮನ ಪ್ರತಿಷ್ಠಾಪನೆಯನ್ನು ಕಣ್ತುಂಬಿಕೊಳ್ಳುವ ಯೋಗವು ಕಾಂಗ್ರೆಸ್ ನವರಿಗೆ ಇಲ್ಲ ಎಂದು ಸಿಟಿ ರವಿ ಕಿಡಿ ಕಾಡಿದ್ದಾರೆ.

ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ  ಲಿಂಕ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *