ಅಯೋಧ್ಯೆ: ರಾಮ ಜನ್ಮಭೂಮಿ ಕುರಿತು ಸುಪ್ರೀಂ ಕೋರ್ಟಿನ ತೀರ್ಪಿನ ಬಳಿಕ ಮಸೀದಿ ನಿರ್ಮಾಣಕ್ಕೆ ನಿಗದಿಪಡಿಸಿರುವ ಧನ್ನಿಪುರದಲ್ಲಿ ಮಸೀದಿ ನಿರ್ಮಾಣ ಮಾಡುವ ಅಗತ್ಯವೇ ಇಲ್ಲ ಎಂದು ಅಯೋಧ್ಯೆ ವಿವಾದದಲ್ಲಿ ಬಾಬ್ರಿ ಮಸೀದಿ ಪರ ಅರ್ಜಿದಾರ ಇಕ್ಸಾಲ್ ಅನ್ಸಾರಿ ಹೇಳಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕುರಿತಾಗಿ ಪ್ರತಿಕ್ರಿಯಿಸಿರುವ ಇಕ್ಬಾಲ್ ಅನ್ಸಾರಿ ‘ಧನ್ನಿಪುರದಲ್ಲಿ ಮಸೀದಿ ನಿರ್ಮಾಣ ಮಾಡುವ ಅಗತ್ಯವೇ ಇಲ್ಲ. ಈ ಜಾಗದಲ್ಲಿ ಕೃಷಿ ಮಾಡಿ, ಬಂದ ಬೆಳೆಯನ್ನು ಹಿಂದು ಮತ್ತು ಮುಸ್ಲಿಮರು ಸಮನಾಗಿ ಹಂಚಿಕೊಳ್ಳಬೇಕು. ಇದನ್ನೇ ನಾನು ಮುಸ್ಲಿಂ ಬಾಂಧವರಿಗೆ ಹೇಳುತ್ತೇನೆ. ಮಸೀದಿ ನಿರ್ಮಾಣಕ್ಕೆ 5 ಎಕರೆಗಳ ಜಾಗವನ್ನು ನೀಡಲಾಗಿದೆ. ಇದರ ಅವಶ್ಯಕತೆ ಜಾಫರ್ ಭಾಯ್ ಗೆ (ಭೂಮಿ ನೀಡಿದ ವ್ಯಕ್ತಿ) ಇದೆ. ಇದರಲ್ಲಿ ಕೃಷಿ ಮಾಡಲು ಅವರಿಗೆ ಬಿಡಬೇಕು ಎಂದು ಹೇಳಿದ್ದಾರೆ. ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿದ್ದರ ವಿರುದ್ಧ ದೂರು ನೀಡಿದವರಲ್ಲಿ ಇಕ್ಬಾಲ್ ಅನ್ಸಾರಿ ಅವರು ಸಹ ಒಬ್ಬರಾಗಿದ್ದರು. ಆದರೆ 2019ರ ನ.2ರಂದು ರಾಮ ಜನ್ಮಭೂಮಿ ತೀರ್ಪು ಬಂದ ಬಳಿಕ, ತೀರ್ಪನ್ನು ಸ್ವಾಗತಿಸಿದ್ದಲ್ಲದೇ, ರಾಮಮಂದಿರ ನಿರ್ಮಾಣಕ್ಕೆ ಸಂತಸ ವ್ಯಕ್ತಪಡಿಸಿದ್ದರು. ಪ್ರಾಣ ಪ್ರತಿಷ್ಠಾಪನೆಗೆ ಹೋಗುವುದಾಗಿಯೂ ಅವರು ಹೇಳಿದ್ದರು.
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ