ಅಜೆಕಾರು:ಯೋಚನೆಗಳು ಯೋಜನೆಗಳಾದಾಗ ಉದ್ಯಮಗಳು ಹುಟ್ಟಿಕೊಳ್ಳುತ್ತವೆ,ಇದರಿಂದ ಉದ್ಯೋಗ ಸೃಷ್ಟಿಯ ವಿಫುಲ ಅವಕಾಶಗಳ ಆರ್ಥಿಕತೆಗೆ ಸಹಕಾರಿಯಾಗಲಿದೆ ಎಂದು ಉದ್ಯಮಿ ಮುನಿಯಾಲು ಉದಯ ಶೆಟ್ಟಿ ಹೇಳಿದರು.
ಅವರು ಜ.15 ರಂದು ಅಜೆಕಾರು ಬಸ್ ನಿಲ್ದಾಣದ ಸಮೀಪದಲ್ಲಿ ವಿಷ್ಣುಮೂರ್ತಿ ಬಿಲ್ಡರ್ಸ್ & ಡೆವಲಪ್ಪರ್ಸ್ ವತಿಯಿಂದ ಅಜೆಕಾರ್ ಕಾಂಪ್ಲೆಕ್ಸ್’ನ ಶಿಲಾನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಜೆಕಾರ್ ಕಾಂಪ್ಲೆಕ್ಸ್ ಉತ್ತರೋತ್ತರವಾಗಿ ಅಭಿವೃದ್ದಿಯಾಗಲಿ ಎಂದು ಶುಭಕೋರಿದರು.
ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಿದಾಗ ನಮ್ಮ ಹುಟ್ಟೂರು ಮರೆಯಬಾರದು, ಕರ್ಮಭೂಮಿ ಬದುಕು ಕಟ್ಟಿಕೊಟ್ಟರೆ ಜನ್ಮಭೂಮಿ ಬದುಕನ್ನು ಪರಿಪೂರ್ಣಗೊಳಿಸುತ್ತದೆ ಎಂದು ನೂತನ ಉದ್ಯಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಅಜೆಕಾರು ಹೊಟೇಲ್ ಮೀನಾ ದ ಮಾಲಕ ಹಾಗೂ ಉದ್ಯಮಿ ಸುಂದರ ಶೆಟ್ಟಿ ಪಮ್ಮೊಟ್ಟು, ಉಡುಪಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಡಾ.ಸಂತೋಷ್ ಕುಮಾರ್ ಶೆಟ್ಟಿ, ಮಸೀದಿಯ ಧರ್ಮಗುರು ಉಮ್ಮರ್ ಫಾರೂಕ್ ಜವಾಹಿರಿ, ವೇದಮೂರ್ತಿ ಅರುಣ್ ಭಟ್, ಸಾಣೂರು ದೇಂದಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ರಾಮ ಭಟ್,ಹೆರ್ಮುಂಡೆ ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕ ರಾಘವೇಂದ್ರ ಭಟ್,
ಮರ್ಣೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಭಾವತಿ ನಾಯಕ್, ಉಪಾಧ್ಯಕ್ಷೆ ಮೇರಿ ಮಸ್ಕರೇನ್ಹಸ್ ,ಎಣ್ಣೆಹೊಳೆ ರೇಶ್ಮಾ ಸ್ಟೋರ್ ಮಾಲಕ ಪಿ. ಹಾಜಿ ,ಮೂಲ್ಕಿ ಇಂಜಿನಿಯರಿಂಗ್ ಅಸೋಸಿಯೇಶನ್ ಅಧ್ಯಕ್ಷ ಜೀವನ್ ಶೆಟ್ಟಿ, ನ್ಯಾಯವಾದಿ ಹರೀಶ್ ಅಧಿಕಾರಿ, ವಿಜಯ ಶೆಟ್ಟಿ, ರಾಜಾಪುರ ಸಾರಸ್ವತ ಕ್ರೆಡಿಟ್ ಕೋಅಪರೇಟಿವ್ ಸೊಸೈಟಿ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು ಮುಂತಾದವರು ಉಪಸ್ಥಿತರಿದ್ದರು
ಪಾಲುದಾರರಾದ ಸುಧಾಕರ ಶೆಟ್ಟಿ ಹೆರ್ಮುಂಡೆ ಹಾಗೂ ರವೀಂದ್ರ ಶೆಟ್ಟಿ ಸಾಣೂರು ಅತಿಥಿಗಳನ್ನು ಗೌರವಿಸಿದರು.
ಹರೀಶ್ ನಾಯಕ್ ಸ್ವಾಗತಿಸಿ, ಶಿಕ್ಷಕ ಶ್ರೀಕಾಂತ್ ಭಟ್ ವಂದಿಸಿದರು.
ಸುಹಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ