Share this news

ಕಾರ್ಕಳ: ಶೈಕ್ಷಣಿಕ ಕ್ಷೇತ್ರದಲ್ಲಿ ಸಹಯೋಗ ಮತ್ತು ಉತ್ಕೃಷ್ಟತೆಯನ್ನು ರೂಪಿಸುವ ಹಿನ್ನಲೆಯಲ್ಲಿ ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಕ್ಯಾಂಪಸ್ ಸೆಂಟರ್ ನ ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮದರ್ಜೆ ಕಾಲೇಜು ಭಾರತೀಯ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ (ಐಸಿಎಐ) ಶೈಕ್ಷಣಿಕ ವಿಭಾಗದೊಂದಿಗೆ ಶೈಕ್ಷಣಿಕ ಮತ್ತು ಸಂಶೋಧನಾ ಸಹಯೋಗಕ್ಕಾಗಿ ಜ.11 ರಂದು ಮಂಗಳೂರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಪರಸ್ಪರ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲಾಯಿತು.
ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮದರ್ಜೆ ಕಾಲೇಜು 1988 ರಿಂದ ಕಾರ್ಕಳದ ನಿಟ್ಟೆ ಗ್ರಾಮದಲ್ಲಿ ಪದವಿ ಶಿಕ್ಷಣವನ್ನು ನೀಡುತ್ತಿದೆ. ಪ್ರಸ್ತುತ 2022 ನೇ ಸಾಲಿನಿಂದ ಗ್ರಾಮೀಣ ಪ್ರದೇಶದಲ್ಲಿ ಜಾಗತಿಕ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಧ್ಯೇಯದೊಂದಿಗೆ ಸಂಸ್ಥೆಯು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಆಫ್ ಕ್ಯಾಂಪಸ್ ಸೆಂಟರ್ ನ ಭಾಗವಾಗಿ ಶೈಕ್ಷಣಿಕ ಚಟುವಟಿಕೆಗಳನ್ನು ಮುಂದುವರಿಸುತ್ತಿದೆ. ಈ ಹಿನ್ನಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿ ದೇಶದ ಅನೇಕ ಅತ್ಯುನ್ನತ ಸಂಸ್ಥೆಗಳೊಂದಿಗೆ ಸಹಯೋಗಕ್ಕೆ ಒಪ್ಪಂದಗಳನ್ನು ಮಾಡಿಕೊಂಡಿದೆ. ಐಸಿಎಐ ಒಂದಿಗಿನ ಈ ಒಪ್ಪಂದವು ಸಂಸ್ಥೆಯ ಶೈಕ್ಷಣಿಕ ಬದ್ದತೆಯನ್ನು ಮತ್ತಷ್ಟು ಖಾತರಿಪಡಿಸುವುದಾಗಿದೆ.
ಐಸಿಎಐ ಒಂದಿಗಿನ ಈ ಒಪ್ಪಂದವು ವಾಣಿಜ್ಯ ಶಾಸ್ತ್ರ ಮತ್ತು ನಿರ್ವಹಣಾ ಶಾಸ್ತ್ರಗಳ ಅಡಿಯಲ್ಲಿ ನೀಡಲಾಗುವ ವಿಷಯಗಳಿಗೆ ಶೈಕ್ಷಣಿಕ ಸಹಕಾರವನ್ನು ನೀಡುವ ಧ್ಯೇಯವನ್ನು ಒಳಗೊಂಡಿದೆ. ಈ ಮೂಲಕ ಶಿಕ್ಷಣ ಸಂಸ್ಥೆಯು ಹೆಚ್ಚು ಪರಿಣಾಮಕಾರಿಯಾಗಿ ಶೈಕ್ಷಣಿಕ ಮತ್ತು ಸಂಶೋಧನೆಯಲ್ಲಿ ತೊಡಗಿಕೊಳ್ಳಲು ಬೇಕಾದ ಜ್ಞಾನ ಮತ್ತು ಕೌಶಲ್ಯಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವಲ್ಲಿ ಈ ಸಹಯೋಗ ನೆರವು ನೀಡುತ್ತದೆ. ಅಲ್ಲದೆ ಈ ಮೂಲಕ ಮುಂದಿನ ಪೀಳಿಗೆಯ ಪದವೀಧರರನ್ನು ಔಧ್ಯೋಗಿಕ ಕ್ಷೇತ್ರದಲ್ಲಿ ನಿಪುಣರನ್ನಾಗಿಸುವ ಉದ್ದೇಶವನ್ನು ಈ ಜ್ಞಾಪನಾ ಪತ್ರ ಒಳಗೊಂಡಿದೆ. ತಿಳುವಳಿಕೆ ಪತ್ರಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ಐಸಿಎಐ ನ ಶೈಕ್ಷಣಿಕ ಮಂಡಳಿ ಉಪಾಧ್ಯಕ್ಷ ದಯಾನಿವಾಸ್ ಶರ್ಮಾ ಮಾತನಾಡಿ ಈ ನಮ್ಮ ಸಂಸ್ಥೆಗಳ ನಡುವಿನ ಒಪ್ಪಂದವು ಶೈಕ್ಷಣಿಕ ವಲಯದ ಪಠ್ಯಕ್ರಮಗಳು ಉದ್ಯಮದ ಗುಣಮಟ್ಟ ಮತ್ತು ಬೇಡಿಕೆಗಳನ್ನು ಪೂರೈಸಲು ನೆರವು ನೀಡುತ್ತದೆ ಎಂದು ತಿಳಿಸದರು.
ಹಾಗೆಯೇ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಿ.ಎ. ಕೇಂದ್ರೀಯ ಪರಿಷತ್ ಸದಸ್ಯ ಎಸ್. ಶ್ರೀನಿವಾಸ್ ಕೋಥಾ ಮಾತನಾಡಿ ಈ ರೀತಿಯ ಸಹಯೋಗಗಳು ಶಿಕ್ಷಣರಂಗದಲ್ಲಿ ಸಕಾರಾತ್ಮಕ ಬದಲಾವಣನೆಗಳನ್ನು ತರಲು ಅಗತ್ಯವಿರುವ ಪ್ರಾಯೋಗಿಕ ಕೌಶಲ್ಯ ಮತ್ತು ನೈತಿಕ ಮೌಲ್ಯಗಳನ್ನ ಹೊಂದಿರುವ ನವ ಪದವೀಧರರನ್ನು ರೂಪಿಸಲು ಸಹಕಾರಿಯಾಗಿದೆ ಎಂದರು. ಐಸಿಎಐ ಶೈಕ್ಷಣಿಕ ಮಂಡಳಿ ಅಧ್ಯಕ್ಷ ವಿಶಾಲ್ ಪಿ. ದೋಷಿ ತಿಳುವಳಿಕಾ ಪತ್ರಕ್ಕೆ ಸಹಿ ಹಾಕಿ ಸಂಸ್ಥೆಗೆ ಅಭಿನಂದನೆಗಳನ್ನು ತಿಳಿಸಿದರು.
ಪರಸ್ಫರ ಸಹಯೋಗದ ತಿಳುವಳಿಕೆ ಪತ್ರಕ್ಕೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಐಸಿಎಐ ನ ಮಂಗಳೂರು ಶಾಖೆಯ ಅಧ್ಯಕ್ಷ ಸಿಎ ಗೌತಮ್ ನಾಯಕ್ ಎಂ, ನಿಟ್ಟೆ ಪರಿಗಣಿತ ವಿಶ್ವಿವಿದ್ಯಾಲಯದ ಉಪಕುಲಪತಿ ಡಾ. ಎಂ.ಎಸ್. ಮೂಡಿತ್ತಾಯ, ಡಾ.ಎನ್.ಎಸ್.ಎ.ಎಂ. ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ವೀಣಾಕುಮಾರಿ. ಬಿ.ಕೆ. ಉಪಸ್ಥಿತರಿದ್ದರು.

ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ  ಲಿಂಕ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *